Header Ads
Header Ads
Breaking News

ಸಂತ ಅಲೋಶಿಯಸ್ ಸಂಧ್ಯಾ ಪ.ಪೂ ಕಾಲೇಜಿನ 52ನೇ ವಾರ್ಷಿಕೋತ್ಸವ

 ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಪದವಿ ಪೂರ್ವ ಕಾಲೇಜಿನ ೫೨ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತ್ತು.

ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಲೋಯೊಲಾ ಹಾಲ್‌ನಲ್ಲಿ ಸಂತ ಅಲೋಶಿಯಸ್ ಸಂಧ್ಯಾ ಪದವಿ ಪೂರ್ವ ಕಾಲೇಜಿನ ೫೨ನೇ ವಾರ್ಷಿಕೋತ್ಸವ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಪದವಿ ಪೂರ್ವ ಪ್ರಾಚಾರ್ಯ ಸಂಘದ ಕಾರ್ಯದರ್ಶಿ ಹಾಗೂ ಬಂಟ್ವಾಳ ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಯೂಸುಫ್ ಪಾಲ್ಗೊಂಡಿದ್ರು. ಈ ವೇಳೆ ಮಾತನಾಡಿದ ಅವರು,ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿ ಆಗಲು ಸಾಧ್ಯ, ವಿದ್ಯಾರ್ಥಿ ಜೀವನದಲ್ಲೂ ಸ್ಪರ್ಧಾತ್ಮಕ ಯುಗ ಆರಂಭಗೊಂಡಿದೆ. ಅದಕ್ಕೆ ಬೇಕಾಗಿರುವ ಕಾರ್ಯಕ್ಷಮತೆಯನ್ನ ಬೆಳೆಸಿಕೊಳ್ಳವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ರೆಕ್ಟರ್ ರೇವೆಂಡ್ ಫಾದರ್ ಡೈನೀಶಿಯಸ್ ವಾಝ್ ಎಸ್.ಜೆ ವಹಿಸಿದ್ರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಯಲ್ಲಿ ತಂತ್ರಜ್ಞಾನ ಕೂಡ ಅಗತ್ಯವಿದೆ. ತಂತ್ರಜ್ಞಾನವಿದ್ರೂ ಸ್ವಜ್ಞಾನವಿಲ್ಲದಂತಾಗಿದೆ.ಅದ್ರೆ ಈ ಶಿಕ್ಷಣ ಸಂಸ್ಥೆಯಲ್ಲಿ ಸ್ವಜ್ಞಾನ ಸಿಗುತ್ತದೆ. ಯಾಕೆಂದರೆ ಕೆಲಸದ ಜೊತೆಯಲ್ಲೂ ಶಿಕ್ಷಣ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಕಾಲೇಜಿನ ಪ್ರಾಚಾರ್ಯರಾದ ರೇ.ಫಾದರ್ ಮೆಲ್ವಿನ್ ಮೆಂಡೋನ್ಸಾ ಎಸ್.ಜೆ ಅವರು 2018-19ನೇ ಸಾಲಿನ ಶೈಕ್ಷಣಿಕ ಸಾಲಿನ ವರದಿಯನ್ನ ಮಂಡಿಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಗಣ್ಯರು ನೀಡಿ, ಗೌರವಿಸಿದ್ರು. ಕಾರ್ಯಕ್ರಮದಲ್ಲಿ ಸಂಸ್ಥೆ ಆರ್ಥಿಕ ನಿರ್ವಹಣಾಧಿಕಾರಿ ರೇ.ಫಾದರ್ ಜಾನ್ ಲ್ಯಾಂಗ್ ಬೊಸ್ಕೋ ಎಸ್.ಜೆ ಕಾಲೇಜಿನ ಸಂಯೋಜನಕರಾದ ಡಾ. ಪ್ರದೀಪ್, ಕಾರ್ಯಕ್ರಮ ಸಂಚಾಲಕರಾದ ಅಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಹೈಟೆಕ್ ಆಶ್ರಮ ಎಂಬ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Related posts

Leave a Reply