Header Ads
Header Ads
Breaking News

ಸಂತ ಆಗ್ನೇಸ್ ಕಾಲೇಜಿನ ಸ್ಕಾರ್ಪ್ ವಿವಾದ

 ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಸ್ಕಾರ್ಪ್ ವಿವಾದಕ್ಕೆ ಸಂಬಂಧಿಸಿ, ಇದೀಗ ಕಾಲೇಜಿನ ವಿದ್ಯಾರ್ಥಿನಿಗೆ ವಿದೇಶದಿಂದ ಅನಾಮಿಕ ಬೆದರಿಕೆ ಕರೆ ಬಂದಿದೆ. ಇನ್ನು ಜಸ್ಟೀಸ್ ಫಾರ್ ಸ್ಕಾರ್ಫ್ ಆಂಡ್ ನಮಾಝ್’ ವಾಟ್ಸ್ ಆಪ್ ಗ್ರೂಪ್‌ನಿಂದ ಹೊರ ಹೋದುದಕ್ಕೆ ವಿದೇಶದಿಂದ ಬೆದರಿಕೆ ಕರೆ ಬಂದಿರುವುದಾಗಿ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನೌರೀನ್ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು. ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಲೇಜಿನ ಪ್ರಾಂಶುಪಾಲೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ವಿದ್ಯಾರ್ಥಿನಿ , ಜಸ್ಟೀಸ್ ಫಾರ್ ಸ್ಕಾರ್ಫ್ ಆಂಡ್ ನಮಾಝ್’ ವಾಟ್ಸ್ ಆಪ್ ಗ್ರೂಪ್‌ನಿಂದ ಹೊರ ಹೋದುದಕ್ಕೆ ವಿದೇಶದಿಂದ ಅನಾಮಿಕ ಬೆದರಿಕೆ ಕರೆ ಬರುತ್ತಿದೆ ತನ್ನನ್ನು ಈ ಗ್ರೂಪ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ. ಅಲ್ಲದೆ ಅದರಲ್ಲಿ ಚರ್ಚೆಯಾಗುತ್ತಿರುವ ಮಧ್ಯೆಯೇ ಗ್ರೂಪ್‌ನಿಂದ ಹೊರ ಹೋಗಿದ್ದೆ. ಈ ಮಧ್ಯೆ ವಿದೇಶದಿಂದ ತನಗೆ ಅನಾಮಿಕ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಿದರು.  ಕಾಲೇಜು ಪ್ರಾಂಶುಪಾಲೆ ಡಾ.ಎಂ.ಜೆಸ್ವಿನಾ ಮಾತನಾಡಿ ಕಾಲೇಜಿನ ಪ್ರಾಧ್ಯಾಪಕರು ಯಾವುದೇ ಸಂದರ್ಭ ಯಾವುದೇ ವಿದ್ಯಾರ್ಥಿನಿ ಸ್ಕಾರ್ಫ್ ಎಳೆದಿಲ್ಲ. ತರಗತಿಯೊಳಗೆ ಸ್ಕಾರ್ಫ್ ಹಾಕದಂತೆ ಸೂಚಿಸಲಾಗಿದೆ. ಆದರೆ, ಸಂಸ್ಥೆಯ ಆವರಣದೊಳಗೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ವಿರೋಧವಿಲ್ಲ. ಪ್ರತಿಭಟಿಸಿದ ವಿದ್ಯಾರ್ಥಿನಿಯರ ಅವರ ಹೆತ್ತವರ ಸಮ್ಮುಖದಲ್ಲಿ ಮೂರು ದಿನದೊಳಗೆ ಲಿಖಿತ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿಲಾಗಿದೆ. ನಾವ್ಯಾರು ಖಾಲಿ ಕಾಗದದ ಮೇಲೆ ವಿದ್ಯಾರ್ಥಿನಿಯರಿಂದ ಸಹಿ ಪಡೆದುಕೊಂಡಿಲ್ಲ ಎಂದು ಹೇಳಿದರು.ವಿದ್ಯಾರ್ಥಿನಿ ಫಾತಿಮಾ ಅನೀಸ್‌ರ ತಂದೆ ಅನೀಸ್ ಮಾತನಾಡಿ ಸ್ಕಾರ್ಫ್ ವಿವಾದವನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲೆ, ವಿದ್ಯಾರ್ಥಿನಿಯರು ಹಾಗೂ ಪೋಷಕರು ಕೂತು ಬಗೆಹರಿಸಬಹುದಿತ್ತು. ಅದನ್ನು ಕಾಲೇಜಿನ ಹೊರಗಡೆ ವಿವಾದ ಮಾಡಿರುವುದು ಸರಿಯಲ್ಲ ಎಂದರು.ಮಾಧ್ಯಮಗೋಷ್ಠಿಯಲ್ಲಿ ಉಪ ಪ್ರಾಂಶುಪಾಲೆ ಸಿ.ಡಾ.ವೆನಿಸ್ಸಾ ಎ.ಸಿ, ಶಾಲಾ ಸಂಯೋಜಕಿ ಡಾ| ದೇವಿ ಪ್ರಭಾ ಆಳ್ವಾ, ಮತ್ತಿತರರು ಉಪಸ್ಥಿತಿರಿದ್ರು.

Related posts

Leave a Reply