Header Ads
Header Ads
Breaking News

ಸಂತ ಮದರ್ ತೆರೆಸಾರವರ ನೆನಪಿನಲ್ಲಿ ಜಿಲ್ಲಾ ಮಟ್ಟದ ವಿಚಾರ ಸಂಕೀರಣ ನ.6 ರಂದು ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮ

ಮಾನವೀಯತೆ ಪ್ರತಿರೂಪವಾದ ಸಂತ ಮದರ್ ತೆರೆಸಾರವರ ನೆನಪಿನಲ್ಲಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ನಗರದ ಪುರಭವನದಲ್ಲಿ ನವೆಂಬರ್ 6 ರಂದು ಆಯೋಜಿಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದ್ರು. ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವ್ರು, ವಿಚಾರ ಸಂಕೀರಣವನ್ನು ನವದೆಹಲಿಯ ಜವಾಹಲ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಪ್ರೋ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ. ನಾಡಿನ ಖ್ಯಾತ ಸಾಹಿತಿಗಳೂ, ಪ್ರಗತಿಪರ ಚಿಂತಕರಾದ ಕೆ.ನೀಲಾ ಅವ್ರು ವಿಷಯ ಮಂಡನೆಯನ್ನು ಮಾಡಲಿದ್ದಾರೆ ಎಂದು ಅವ್ರು ತಿಳಿಸಿದರು. ಈ ವೇಳೆ ಗೌರವಾಧ್ಯಕ್ಷ ರೋಯ್ ಕ್ಯಾಸ್ಟಲಿನೋ ಮತ್ತಿತರು ಉಪಸ್ಥಿತರಿದ್ದರು.