Header Ads
Header Ads
Breaking News

ಸಂಪಾಜೆಯಲ್ಲಿ ಬಿಗಡಾಯಿಸಿದ ವಿದ್ಯುತ್ ಸಮಸ್ಯೆ :ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಸುಳ್ಯ: ಕಳೆದ ಅನೇಕ ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಜನತೆ ವಿದ್ಯುತ್ ಸಮಸ್ಯೆಯಿಂದ ಬಳಲಿ ಹೋಗಿದ್ದು, ಇದೀಗ ಕಳಪೆ ಗುಣಮಟ್ಟದ ವಿದ್ಯುತ್ ಸಮಸ್ಯೆಯಿಂದಾಗಿ ಮನೆ ಮತ್ತು ಕೃಷಿ ಯಂತ್ರೋಪಕರಣಗಳು ಸುಟ್ಟುಹೋಗುತ್ತಿದೆ. ಇಲ್ಲಿನ ಸಮಸ್ಯೆಗಳಿಗೆ ಇಲಾಖೆ ಎಚ್ಚೆತ್ತು ಗಮನಹರಿಸಿ ಫೆ.27ರ ಒಳಗೆ ಸಮಸ್ಯೆ ಪರಿಹರಿಸಬೇಕು ಇಲ್ಲವಾದಲ್ಲಿ ತೀವ್ರ ತರಹದ ಪ್ರತಿಭಟನೆ ನಡೆಸುವುದಾಗಿ ಎಂದು ಸಂಪಾಜೆ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಎಚ್ಚರಿಸಿದ್ದಾರೆ.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಸಂಪಾಜೆ ಗ್ರಾಮವು ದ.ಕ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶವಾಗಿದ್ದು, ಕೊಡಗು ಜಿಲ್ಲೆಯ ಸಂಪಾಜೆ ಭಾಗವು ದಿನವಿಡೀ ಗುಣಮಟ್ಟದ ವಿದ್ಯುತ್ ಸರಬರಾಜು ಹೊಂದಿದೆ. ಅಲ್ಲಿನ ನಾಗರಿಕರಿಗೆ ಯಾವುದೇ ವಿದ್ಯುತ್ ಸಮಸ್ಯೆ ಇಲ್ಲದೇ ನಿರಾಳವಾಗಿದ್ದಾರೆ. ಆದರೆ ಕೊಡಗು ಜಿಲ್ಲೆಯ ಸಂಪಾಜೆ ಭಾಗದಿಂದ ೧೦೦ಮೀಟರ್ ದೂರದಲ್ಲಿರುವ ಕಲ್ಲುಗುಂಡಿ ಸಂಪಾಜೆ ಪ್ರದೇಶದ ನಾಗರಿಕರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜ್ಯೂನಿಯರ್ ಕಾಲೇಜು, ೪ಪ್ರೌಢಶಾಲೆಗಳು, ೭ಹಿರಿಯ ಪ್ರಾಥಮಿಕ ಶಾಲೆಗಳು, ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳು , ಹಲವು ಅಂಗನವಾಡಿಗಳು ಹಾಗೂ ವಿವಿಧ ಇಂಡಸ್ಟ್ರೀಗಳು ಕಾರ್ಯನಿರ್ವಹಿಸುತ್ತಿದೆ. ವಿದ್ಯುತ್ ಅಭಾವದಿಂದ ಅನೇಕರಿಗೆ ಕೆಲಸವಿಲ್ಲದೆ ಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಸಮಯವೂ ಹತ್ತಿರ ಬರುತ್ತಿದ್ದು, ಅವರ ಭವಷ್ಯ ಕತ್ತಲಾಗುವ ಸಾಧ್ಯತೆ ಕಂಡುಬರುತ್ತಿದೆ. ಗ್ರಾಮ ಪಂಚಾಯಿತಿ ನೀರಿನ ಪಂಪುಗಳು ಚಾಲೂ ಆಗದೆ ಕುಡಿಯುವ ನೀರಿಗೆ ಈಗಾಲೇ ಅಭಾವ ಎದುರಾಗಿದೆ. ಸಣ್ಣ ಕೈಗಾರಿಕೆಗಳಲ್ಲಿನ ಯಾವುದೇ ಯಂತ್ರಗಳು ಚಾಲೂ ಆಗದೆ ಅಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಮಾತ್ರವಲ್ಲದೇ ಗೃಹಬಳಕೆಯ ಗೃಹೋಪಯೋಗಿ ಯಂತ್ರಗಳು ಬಳಸಲಾಗದೆ ಕಷ್ಟಪಡುತ್ತಿದ್ದಾರೆ. ಕೃಷಿಕರ ಪಂಪುಗಳು ಆಗಾಗ ಸುಟ್ಟುಹೋಗುವುದು ಸಾಮಾನ್ಯವಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಸಂಪಾಜೆ ಭಾಗದ ಜನ ಬೇಸತ್ತುಹೋಗಿದ್ದಾರೆ.

ಪತ್ರಿಕಾಗೋಷ್ಟಿಯನ್ನು  ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಜಾನಿ, ಸದಸ್ಯರಾದ ವಿ.ಆರ್.ಪ್ರಸಾದ್, ಕಿಶೋರ್ ಕುಮಾರ್, ಜಿ.ಕೆ.ಹಮೀದ್, ಮೋಹಿನಿ ಕಲ್ತಡ್ಕ, ಎಸ್.ಕೆ.ಹನೀಫ್ ಇದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply