Header Ads
Header Ads
Breaking News

ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರ ತೆರವು ಕಾರ್ಯ ಆರಂಭ: ಪರಿಹಾರ ಕೇಂದ್ರ ಬಿಟ್ಟು ಹೋಗಲು ಒಪ್ಪದ ನಿರಾಶ್ರಿತರು

ಸುಳ್ಯ : ಜೊಡುಪಾಲ ಮತ್ತು ಮೊಣ್ಣಂಗೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಜಲಪ್ರಳಯದಿಂದಾಗಿ ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಇರುವ ನಿರಾಶ್ರಿತರ ತೆರವು ಕಾರ್ಯ ನಡೆಯುತ್ತಿದೆ. ಮಂಗಳವಾರ ರಾತ್ರಿ ಕಲ್ಲುಗುಂಡಿ ಮತ್ತು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಆಗಮಿಸಿದ ಕೊಡಗು ಎ.ಸಿ ಅವರು ನಮ್ಮನ್ನು ಪರಿಹಾರ ಕೇಂದ್ರ ಬಿಟ್ಟು ನೀವು ಹೋಗಬೇಕೆಂದು ಒತ್ತಾಯಿಸಿದ್ದರು.ಈ ಹಿನ್ನಲೆಯಲ್ಲಿ ಕಲ್ಲುಗುಂಡಿ ನಿರಾಶ್ರಿತರು ಕೊಡಗು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಕೊಡಗು ಸಂಪಾಜೆ ಸರಕಾರಿ ಆಸ್ಪತ್ರೆಯ ಕಟ್ಟಡದಲ್ಲಿರುವ ನಿರಾಶ್ರಿತರ ಪರಿಹಾದ ಕೇಂದ್ರದಲ್ಲಿರುವ 7 ಕುಟುಂಬಗಳ 20 ಜನರನ್ನು ಇಲ್ಲಿಂದ ತೆರವುಗೊಳಿಸಲಾಗಿದ್ದು ಕೆಲವರು ಬಾಡಿಗೆ ಮನೆಗೆ ತೆರಳಿದರೆ ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.
ಪರಿಹಾರ ಕೇಂದ್ರದಿಂದ ತೆರಳಿದ ಕೆಲವು ಕುಟುಂಬಗಳಿಗೆ ಮನೆ ಬಾಡಿಗೆ ಎಂದು ಒಂದು ತಿಂಗಳ ಮನೆ ಬಾಡಿಗೆ ಜಿಲ್ಲಾಡಳಿತದಿಂದ ಕೆಲವರಿಗೆ ರೂ.10,000 ಜಮೆಯಾಗಿದ್ದು ಇನ್ನು ಕೆಲವರಿಗೆ ಜಮೆಯಾಗಿಲ್ಲ.ಕಳೆದ ಹದಿನೈದು ದಿವಸಗಳ ಹಿಂದೆ ಕೊಡಗು ಜಿಲ್ಲಾಧಿಕಾರಿಗಳನ್ನು ಕಲ್ಲುಗುಂಡಿ ಮತ್ತು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಕೆಲವು ಜನರು ಬೇಟಿ ಮಾಡಿ ನಿವೇಶನ ಹಾಗೂ ಪರಿಹಾರದ ಬಗ್ಗೆ ಮಾತನಾಡಿದ ಸಂದರ್ಭ ಈ ತಿಂಗಳ ಕೊನೆಗೆ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಮುಚ್ಚಲಾಗುವುದು .ನಿಮಗೆ ಮನೆ ಬಾಡಿಗೆಂದು ರೂ.10,000 ನೀಡಲಾಗುತ್ತದೆ.ಈಗಾಗಲೇ ನಿರಾಶ್ರಿತರಿಗೆ ಮನೆ ಕಟ್ಟಲು ಗುರುತಿಸಲಾದ ಜಾಗದಲ್ಲಿ ಮನೆ ನಿರ್ಮಾಣವಾದ ಬಳಿಕ ಅರ್ಹರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗುತ್ತದೆ ಎಂದು ನಿರಾಶ್ರಿತರಿಗೆ ತಿಳಿಸಿದ್ದರು.ಜೋಡುಪಾಲ ಹಾಗೂ ಎರಡನೇ ಮೊಣ್ಣಂಗೇರಿಯ ನಿರಾಶ್ರಿತರಿಗೆ ಈಗಾಗಲೇ ಕೊಡಗು ಸಂಪಾಜೆ ಶಾಲಾ ಬಳಿ ಹಾಗೂ ಮದೆನಾಡಿನಲ್ಲಿ ಮನೆ ಕಟ್ಟಲು ಜಾಗ ಗುರುತಿಸಲಾಗಿದ್ದು ಇಲ್ಲಿ ಮನೆ ನಿರ್ಮಾಣ ಕೆಲಸವನ್ನು ಇನ್ನು ಆರಂಭ ಮಾಡಿಲ್ಲ.ಈ ಕಾರಣದಿಂದ ಹೆಚ್ಚಿನ ನಿರಾಶ್ರಿತರು ಸರಕಾರ ಬಾಡಿಗೆ ಮನೆಗೆ ನಾವು ತೆರಳಿದರೆ ಪ್ರತಿ ತಿಂಗಳು ನಾವು ಹಣ ನೀಡದಿದ್ದರೆ ನಾವು ಮತ್ತೆ ಬೀದಿ ಪಾಲಾಗಬಹುದು. ಭವಿಷ್ಯದಲ್ಲಿ ಜೀವನ ಕಳೆಯುವದು ಹೇಗೆ? ಮನೆ ನಿರ್ಮಾಣ ಕೆಲಸಕ್ಕೆ ಎಷ್ಟು ವರ್ಷ ಬೇಕಾಗಬುದು ಎಂಬ ಖಚಿತ ಮಾಹಿತಿ ಇಲ್ಲದಿರುವ ಹಿನ್ನಲೆಯಲ್ಲಿ ಕಲ್ಲುಗುಂಡಿಯ ಪರಿಹಾರ ಕೇಂದ್ರದ ಕೆಲವರು ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಯನ್ನು ಬೇಟಿ ನಮಗೆ ಮನೆ ನಿರ್ಮಾಣವಾಗುವ ತನಕ ಪರಿಹಾರ ಕೇಂದ್ರದಲ್ಲಿ ಉಳಿದುಕೊಳ್ಳುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.ಇದಕ್ಕೆ ಜಿಲ್ಲಾಧಿಕಾರಿಯವರು ಬಾಡಿಗೆ ಮನೆ ಆಗದ ನಿರಾಶ್ರಿತರಿಗೆ ಮತ್ತೆ ಪರಿಹಾರ ಕೇಂದ್ರದಲ್ಲಿ ಉಳಿದುಕೊಳ್ಳುವ ಕಾಲಾವಕಾಶ ನೀಡಿದ್ದಾರೆ.
ನಿರಾಶ್ರಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಲ್ಲಿ ಪ್ರಯಾಣಿಸಲು ಉಚಿತ ಬಸ್ಸ್ ಪಾಸನ್ನು ನೀಡಲಾಗಿದ್ದು ಬಸ್ಸ್ ಪಾಸ್ ನವೀಕರಣಗೊಳ್ಳದೆ ಸಮಸ್ಯೆಯಾಗಿದೆ.
ಕಲ್ಲುಗುಂಡಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರು ಕೊಡಗು ಎ.ಸಿ ಜವರೇ ಗೌಡವರು ನಿರಾಶ್ರಿತರ ಕೇಂದ್ರದಿಂದ ತಕ್ಷಣ ತೆರಳಬೇಕೆಂದು ಒತ್ತಾಯಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಎಂದು ಮುಖ್ಯ ಮಂತ್ರಿ ಕುಮಾರ ಸ್ವಾಮಿ,ಜಿಲ್ಲಾಧಿಕಾರಿಗೆ,ಕೊಡಗು ಜಿಲ್ಲಾ ಉಸ್ತುವಾರಿ ಮಂತ್ರಿಗೆ ದೂರು ನೀಡಿದ್ದಾರೆ.

Related posts

Leave a Reply