Header Ads
Header Ads
Breaking News

ಸಂಪಾಜೆ ಸಮೀಪದ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿತ : ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು

ಸುಳ್ಯ: ಸಂಪಾಜೆ ಸಮೀಪದ ಜೋಡುಪಾಲ ಎಂಬಲ್ಲಿ ಮೇಲಿನ ಗುಡ್ಡ ಕುಸಿದ ಪರಿಣಾಮ ನಿರ್ಮಾಣ ಹಂತದ ಮನೆಯೊಂದಕ್ಕೆ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ. ವಿರೇಂದ್ರ ಎಂಬವರ ನಿರ್ಮಾಣ ಹಂತದ ಮನೆಗೆ ಮೇಲಿನ ಗುಡ್ಡ ಕುಸಿದು ಬಂದು ಮನೆಗೆ ಬಡಿದಿರುವುದರಿಂದ ಮನೆ ಜಖಂಗೊಂಡಿದೆ ಎನ್ನಲಾಗಿದೆ. ಇಲಾಖಾ ಅಧಿಕಾರಿ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲಿನಲ್ಲಿ ಜೋಡುಪಾಲದಲ್ಲಿ ಜಲಪ್ರಳಯ ಸಂಭವಿಸಿ ನಾಲ್ಕ ಮಂದಿ ಪ್ರಾಣ ಕಳೆದುಕೊಂಡು ಅಲ್ಲಲ್ಲಿ ಭೂಕುಸಿತಗೊಂಡಿತು.ಭೂವಿಜ್ಞಾನಿಗಳು ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಪ್ರದೇಶ ಜನರ ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದ್ದರು. ಇದೀಗ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಆರಂಭಗೊಳ್ಳದಿದ್ದರೂ ಭೂಕುಸಿತ ಗೊಂಡಿರುವುದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.

Related posts

Leave a Reply

Your email address will not be published. Required fields are marked *