Header Ads
Breaking News

ಸಂಪೂರ್ಣ ಕೆಸರುಮಯವಾದ ಎಪಿಎಂಸಿ ರಸ್ತೆ : ವರುಣನ ಆರ್ಭಟಕ್ಕೆ ಸಂಕಷ್ಟಕ್ಕೊಳಗಾದ ವ್ಯಾಪರಸ್ಥರು

ಮಂಗಳೂರಿನಲ್ಲಿ ನಸುಕಿನಲ್ಲಿ ಸುರಿದ ದಿಢೀರ್ ಮಳೆ ಬೈಕಂಪಾಡಿ ಎಪಿಎಂಸಿ ಯಾರ್ಡಿನ ವ್ಯಾಪಾರಿಗಳನ್ನು ಹೈರಾಣು ಮಾಡಿದೆ. ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಮಂಗಳೂರು ನಗರ ಹೊರವಲಯದಲ್ಲಿ ತಾತ್ಕಾಲಿಕವಾಗಿ ಮಾಡಿರುವ ತರಕಾರಿ ಮಾರುಕಟ್ಟೆಯಲ್ಲಿ ನೀರು ನಿಂತಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಂಪನಕಟ್ಟೆಯಲ್ಲಿದ್ದ ಮಾರುಕಟ್ಟೆಯನ್ನು ಬೈಕಂಪಾಡಿಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಮಹಾನಗರ ಪಾಲಿಕೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಇದೀಗ ದಿಢೀರ್ ಮಳೆಯಾಗಿದ್ದು ಮೈದಾನದಲ್ಲಿ ಇಟ್ಟಿದ್ದ ತರಕಾರಿಗಳು ಮಳೆನೀರಿಗೆ ಕೊಚ್ಚಿ ಹೋಗುವ ಸ್ಥಿತಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ವ್ಯಾಪಾರಸ್ಥರು ಬೈಕಂಪಾಡಿಯಿಂದ ತರಕಾರಿ ಖರೀದಿ ಮಾಡುತ್ತಿದ್ದಾರೆ. ಈಗ ಮಳೆಯಿಂದಾಗಿ ವ್ಯವಸ್ಥೆ ಇಲ್ಲದೆ ವ್ಯಾಪಾರಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಈ ಬಗ್ಗೆ ಮಾಜಿ ಶಾಸಕರಾಜ ಜೆಆರ್  ಲೋಬೋ ಪ್ರತಿಕ್ರಿಯೆ ನೀಡಿ ಮಂಗಳೂರು ನಗರದದಾಯಂತ ಭಾರೀ ಮಳೆ ಹಿನ್ನೆಲೆ ಎಪಿಎಂಸಿ ರಸ್ತೆಯ ವ್ಯಾಪಾರಸ್ಥರಿಗೆ ಭಾರೀ ತೊಂದರೆಯಾಗಿದೆ. ಸಗಟು ವ್ಯಾಪಾರಸ್ಥರು ದೂರವಾಣಿ ಕರೆ ಮಾಡಿ ಸಂಪರ್ಕ ಮಾಡಿ ತಮ್ಮ ಸಮಸ್ಯೆಯನ್ನು ಕಣ್ಣೀರಿಟ್ಟು ಹೇಳಿದ್ದಾರೆ ಹಾಗಾಗಿ ಜಿಲ್ಲಾಡಳಿತ ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಸಿದ್ರು.

Related posts

Leave a Reply

Your email address will not be published. Required fields are marked *