Header Ads
Header Ads
Breaking News

ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಬಳ್ಯಾಡಿ ಸೇತುವೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿರುವ ಸೇತುವೆಯೊಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ತುಕ್ಕು ಹಿಡಿದರುವ ಸೇತುವೆ ಯಾವಾಗ ಬೀಳುತ್ತೋ ಎನ್ನುವ ಆತಂಕದಲ್ಲೇ ಇಲ್ಲಿನ ಜನತೆ ಭಯಭೀತರಾಗಿದ್ದಾರೆ. ಶೀಘ್ರದಲ್ಲೇ ಈ ಸೇತುವೆಯ ಪುನರ ನಿರ್ಮಾಣಕ್ಕೆ ಇಲ್ಲಿನ ಸ್ಥಳೀಯರು ಸಂಬಂದಪಟ್ಟ ಜನಪ್ರತಿನಿಧಿಗಳು ಮತ್ತು ಆಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿರುವ ಈ ಸೇತುವೆ ಕೋಲ್ಚಾರಿ-ಬಳ್ಯಾಡಿ, ಪೈಂಬಿಚ್ಚಾಲು-ನಾಂಗುಳಿ ಮತ್ತು ಮಂಡೆಕೋಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸೇತುವೆ ಶಿಥಿಲಾವಸ್ಥೆಯಲ್ಲಿದ್ದರೂ ಈ ಸೇತುವೆ ಮಾತ್ರ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜವಾಗಿಲ್ಲ. ಸೇತುವೆ ಸಂಪೂರ್ಣ ತುಕ್ಕು ಹಿಡಿದು ಹದಗೆಟ್ಟು ಹೋಗಿದೆ. ಶೀಘ್ರದಲ್ಲೇ ಸೇತುವೆಯನನ್ನು ಪುನರ್ ನಿರ್ಮಿಸಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರಾದ ಪುರುಷೋತ್ತಮ ಕೋಲ್ಚಾರು ಎಚ್ಚರಿಕೆಯನ್ನು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *