Header Ads
Header Ads
Breaking News

ಸಂಪೂರ್ಣ ಹದಗೆಟ್ಟ ಕಣ್ವತೀರ್ಥ ರಸ್ತೆ ಮರು ಡಾಮರೀಕರಣಕ್ಕೆ ಚಾಲನೆ ಜಿ.ಪಂ. ನಿಂದ ಕಾಮಗಾರಿಗೆ 10 ಲಕ್ಷ ರೂ. ಮಂಜೂರು

ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಮಂಜೇಶ್ವರದ ಕಣ್ವತಿರ್ಥದ ರಸ್ತೆ ಸಂಪೂರ್ಣವಾಗಿ ಶೋಚನೀಯವಸ್ಥೆಗೆ ತಲುಪಿತ್ತು. ಇದೀಗ ಕೊನೆಗೂ ಮರು ಡಾಮಾರೀಕರಣದ ಭಾಗ್ಯ ಲಭಿಸಿದೆ.

ಇದೀಗ ಜಿಲ್ಲಾ ಪಂಚಾಯತ್‌ನ 2017-2018 ರ ಪದ್ದತಿಯಲ್ಲಿ ಕಣ್ವತೀರ್ಥ ರಸ್ತೆ ಮರು ಡಾಮಾರೀಕರಣದ ಕಾಮಗಾರಿಗೆ 10 ಲಕ್ಷ ರೂ. ಮಂಜೂರು ಗೊಂಡಿದ್ದು. ಕಾಮಗಾರಿ ಕೂಡಾ ಆರಂಭಗೊಂಡಿದೆ.

ಕಳೆದ ಹಲವಾರು ವರ್ಷಗಳಿಂದ ಹದೆಗೆಟ್ಟಿದ್ದ ಈ ರಸ್ತೆಯ ಬಗ್ಗೆ ಸ್ಥಳೀಯರು ಹಾಗೂ ಸಂಘಟನೆಯ ಕಾರ್ಯಕರ್ತರು ನಿರಂತರವಾಗಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ. ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರಿಗೆ ಸ್ಥಳೀಯರು ನೀಡಿದ ಮನವಿಗೆ ಸ್ಪಂಧಿಸಿದ ಅವರು ರಸ್ತೆ ಕಾಮಗಾರಿಗೆ ಹಣ ಮಂಜೂರು ಮಾಡುವಂತೆ ಮಾಡಿದ್ದಾರೆ.

ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರಡು ಅಥವಾ ಮೂರು ದಿನಗಳ ಮಟ್ಟಿಗೆ ಕಣ್ವತೀರ್ಥ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

Related posts