Header Ads
Breaking News

ಸಂಪೂರ್ಣ ಹದಗೆಟ್ಟ ಬಂದರ್ ರಸ್ತೆ : ಟೆಂಪೋ ಚಾಲಕ ಮಾಲಕರ ಯೂನಿಯನ್‌ನಿಂದ ಶ್ರಮದಾನ

ಸಂಪೂರ್ಣ ಹದಗೆಟ್ಟ ನಗರದ ಕೆನರಾ ಗೂಡ್ಸ್ ಬೀಬಿ ಅಲಬಿಯಿಂದ ಬಂದರ್ ಪೊಲೀಸ್ ಸ್ಟೇಷನ್ ವರೆಗಿನ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಆಗ್ರಹಿಸಿ ಬಂದರ್ ಟೆಂಪೋ ಚಾಲಕ ಮಾಲಕರ ಯೂನಿಯನ್ ವತಿಯಿಂದ ಶ್ರಮದಾನ ಮಾಡುವ ಮೂಲಕ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೋಷಿಯಲ್ ಡೆಮೊಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಪರ್ಲಿಯಾ ಅವರು, ಮೂಲ ಸೌಕರ್ಯ ಒದಗಿಸಿಕೊಡಬೇಕಾಗಿದ್ದು ಮಾನಪಾ ಜನಪ್ರತಿನಿದಿಗಳ ಕರ್ತವ್ಯವಾಗಿದೆ. ಆದರೆ ಗುಂಡಿ ತುಂಬಿದ ಇಲ್ಲಿನ ರಸ್ತೆಯನ್ನು ನೋಡಿದರೆ ಸ್ಥಳೀಯಾಡಳಿತ ಇದೆಯೋ ಎಂದು ಸಂಶಯ ಬರುತ್ತಿದೆ. ಇಲ್ಲಿನ ಗೂಡ್ಸ್ ಟೆಂಪೋ ಚಾಲಕರಿಗೆ ಇರುವ ಸಾಮಾಜಿಕ ಕಳಕಳಿ ಇಲ್ಲಿನ ಜನಪ್ರತಿನಿದಿನಗಳಿಗೆ ಇಲ್ಲದೇ ಹೋಗಿದ್ದು ದುರಾದೃ?ವಾಗಿದೆ ಎಂದು ಹೇಳಿದರು. ಶ್ರಮದಾನದ ನೇತೃತ್ವವನ್ನು ರಮೀಜ್ ಪಾಂಡೇಶ್ವರ ವಹಿಸಿದ್ದರು. ಎಸ್ಡಿಟಿಯು ಜಿಲ್ಲಾ ಸಮಿತಿ ಸದಸ್ಯ ನೌಫಾಲ್ ಕುದ್ರೋಳಿ, ಆಟೋ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಹಕೀಮ್ ಕಾನ, ಮುಖಂಡರಾದ ಅಮೀನ್ ಬಂದರ್, ಯೂನಿಯನ್ ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ, ಸಮಿತಿ ಸದಸ್ಯ ಬದ್ರು ತುಂಬೆ, ಬಶೀರ್, ನಾಸಿರ್, ಇರ್ಫಾನ್, ಹ?ದ್, ಅಜೀತ್, ಶಾಫಿ, ಇ?ದ್, ಮುಸ್ತಾಫಾ ಶಾಮೀರ್, ಸಫ್ವಾನ್ ಮತ್ತಿತರರು ಭಾಗವಹಿಸದ್ದರು.

Related posts

Leave a Reply

Your email address will not be published. Required fields are marked *