Header Ads
Header Ads
Breaking News

ಸಂಪ್ಯದಲ್ಲಿ ರಿಕ್ಷಾ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ: ತಿರುಪತಿ ಯಾತ್ರೆ ಸಿದ್ಧತೆಯಲ್ಲಿದ್ದ ಮಹಿಳೆಯ ಮೃತ್ಯು

ಪುತ್ತೂರು : ಅಟೋ ರಿಕ್ಷಾವೊಂದಕ್ಕೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ತಿರುಪತಿ ಯಾತ್ರೆ ಕೈಗೊಳ್ಳಲು ಸಿದ್ಧರಾಗಿ ತನ್ನ ಕುಟುಂಬದ ಮನೆಯಲ್ಲಿ ನಡೆಯಲಿದ್ದ ವೆಂಕಟ್ರಮಣ ದೇವರ ಮುಡಿಪು ಪೂಜೆಗಾಗಿ ತನ್ನ ಪತಿ ಹಾಗೂ ಸಂಬಂಧಿಕರ ಜೊತೆ ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪ ಮಾಣಿ ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.


ಆರ್ಯಾಪು ಗ್ರಾಮದ ಕುಂಜೂರು ಪಂಜ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ಅಮೈ ನಿವಾಸಿ,ರಿಕ್ಷಾ ಚಾಲಕರಾದ ಮೋಹನ ಗೌಡ ಅವರ ಪತ್ನಿ ಲೀಲಾವತಿ ಮೃತಪಟ್ಟ ಮಹಿಳೆ. ಮೋಹನ ಗೌಡ ಅವರು ಗಂಭೀರ ಗಾಯಗೊಂಡಿದ್ದಾರೆ.
ಲೀಲಾವತಿ ಅವರ ಕುಟುಂಬದ ಮನೆಯಾದ ಆರ್ಯಾಪು ಗ್ರಾಮದ ಬೇರಿಕೆ ಎಂಬಲ್ಲಿರುವ ಸತೀಶ್ ಗೌಡ ಅವರ ಮನೆಯಲ್ಲಿ ಭಾನುವಾರ ವೆಂಕಟ್ರಮಣ ಸೇವೆ ನಡೆಯಲಿತ್ತು. ವೆಂಕಟ್ರಮಣ ಸೇವೆ ನಡೆದ ಬಳಿಕ ಕುಟುಂಬದ ಕೆಲವು ಮಂದಿ ಸದಸ್ಯರು ತಿರುಪತಿ ಯಾತ್ರೆ ಕೈಗೊಳ್ಳುವವರಿದ್ದರು. ಕುಟುಂಬದ ಸದಸ್ಯೆಯಾದ ಲೀಲಾವತಿ ಅವರು ತಿರುಪತಿ ಯಾತ್ರೆಗೆ ತೆರಳುವ ಸಲುವಾಗಿ ಭಾನುವಾರ ಮುಂಜಾನೆ ತನ್ನ ಪತಿ ಮೋಹನ ಗೌಡ ಮತ್ತು ಇತರ ಮೂವರು ಸಂಬಂಧಿಕರೊಂದಿಗೆ ಕುಟುಂಬದ ಮನೆಯಾದ ಬೇರಿಕೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೋಹನ ಗೌಡ ಅವರು ಚಲಾಯಿಸಿಕೊಂಡು ಸಂಪ್ಯ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ‘ಪ್ರಗತಿ’ ಹೆಸರಿನ ಖಾಸಗಿ ಬಸ್ ಸಂಪ್ಯ ಸಮೀಪದ ಆರ್ಯಾಪು ಸೇವಾ ಸಹಕಾರಿ ಬ್ಯಾಂಕಿನ ಎದುರು ತಿರುವು ರಸ್ತೆಯಲ್ಲಿ ವಾಹನವೊಂದನ್ನು ಓವರ್‌ಟೇಕ್ ಮಾಡುವ ಯತ್ನದಲ್ಲಿ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. ರಿಕ್ಷಾ ನಜ್ಜುಗುಜ್ಜಾಗಿದೆ.
ರಿಕ್ಷಾ ಚಾಲಕ ಮೋಹನ ಗೌಡ, ಅವರ ಪತ್ನಿ ಲೀಲಾವತಿ, ಮೋಹನ ಗೌಡ ಅವರ ಸಹೋದರ ಬಾಬು ಗೌಡ ,ಅವರ ಪತ್ನಿ ಸುಶೀಲ ಮತ್ತು ಸಂಬಂಧಿಕರಾದ ಕಮಲ ಎಂಬವರು ಗಾಯಗೊಂಡಿದ್ದು,ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಗಿದ್ದರೂ ಆ ವೇಳೆಗಾಗಲೇ ಲೀಲಾವತಿ ಅವರು ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಗಂಭೀರ ಗಾಯಗೊಂಡಿರುವ ಮೋಹನ ಗೌಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಪುತ್ತೂರಿನ ‘ಪುತ್ತೂರು ಸಿಟಿ’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. sಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಲೀಲಾವತಿ ಅವರು ಪುತ್ತೂರು ಪುರಸಭೆಯ ಮಾಜಿ ಸದಸ್ಯ, ಹಿಂದೂ ಸಂಘಟನೆಯ ಪ್ರಮುಖರಾದ ಸಂಕಪ್ಪ ಗೌಡ ಅವರ ಸಹೋದರಿಯಾಗಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದೇವತಾ ಕಾರ್ಯಕ್ಕೆ ವಿಘ್ನ-ಸೂತಕದ ಛಾಯೆ

ಲೀಲಾವತಿ ಅವರ ಕುಟುಂಬದವರು ತಿರುಪತಿ ಯಾತ್ರೆ ಕೈಗೊಳ್ಳಲು ವೆಂಕಟ್ರಮಣ ಸೇವೆಗಾಗಿ ಕೆಲ ದಿನಗಳ ಹಿಂದೆಯೊಮ್ಮೆ ದಿನ ನಿಗದಿಪಡಿಸಿದ್ದರೂ ಕುಟುಂಬಕ್ಕೆ ಎದುರಾದ ಸೂತಕದ ಹಿನ್ನಲೆಯಲ್ಲಿ ರದ್ದಾಗಿತ್ತು. ಆ ಬಳಿಕ ಮತ್