Header Ads
Header Ads
Breaking News

ಸಂವಿಧಾನದ ನಿಯಮವನ್ನು ಗಾಳಿಗೆ ತೂರಿ ಬಿಎಸ್‌ವೈ ಸರಕಾರ ರಚಿಸಿದ್ದಾರೆ: ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಪ್ರತಿಕ್ರಿಯೆ

ಯಡಿಯೂರಪ್ಪ ಅವರಿಗೆ ಬಹುಮತ ಇಲ್ಲ, ಅವರದು ಅಲ್ಪ ಮತದ ಸರಕಾರ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಪ್ರತಿಕ್ರಿಸಿದ್ದಾರೆ. ಅವರು ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಿಎಸ್‌ವೈ ಸಂವಿಧಾನದ ನಿಯಮವನ್ನು ಗಾಳಿಗೆ ತೂರಿ ಸರಕಾರ ರಚಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ, ಇದು ದೇಶದಲ್ಲಿ ಎಲ್ಲೂ ನಡೆಯಲಿಲ್ಲ ಎಂದು ಹೇಳಿದ್ರು. ಇನ್ನು ರಾಜ್ಯಪಾಲರು ಪಕ್ಷಪಾತ ಮಾಡಿದ್ದಾರೆ ಎಂದ ಅವರು, ಯಾರಾದರೂ ಇದರ ವಿರುದ್ಧ ಕೊರ್ಟ್ ಹೋದ್ರೆ ಈ ಸರ್ಕಾರ ಬಿದ್ದು ಹೋಗುತ್ತದೆ. ಸದನದ ಸದಸ್ಯರ ಸಂಖ್ಯೆ ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ. ಬಿಜೆಪಿಯದ್ದು ಸಂಖ್ಯಾಬಲ ಇಲ್ಲದ ಜನ ಬೆಂಬಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಈಗಿನ ಸರಕಾರ ಆರ್‌ಎಸ್‌ಎಸ್, ಬಿಜೆಪಿ, ಅತೃಪ್ತರು ಮಾಡಿದ ಸರಕಾರ ಎಂದು ಹೇಳಿದ್ರು, ಇನ್ನು ಉಮೇಶ್ ಕತ್ತಿ ಅವರು ಅತೃಪ್ತ 15 ಜನರಿಗೂ ಮಂತ್ರಿ ಪದವಿ ನೀಡಬೇಕು ಅಂತ ಹೇಳಿದ್ದಾರೆ. ಇವರೆಲ್ಲ ಸೇರಿ ರಾಜ್ಯವನ್ನು ಲೂಟಿ ಮಾಡಲು ಮತ್ತೆ ಬಂದಿದ್ದಾರೆ. ನಮ್ಮ ಸರಕಾರದ ಯೋಜನೆಗೆ ತೊಂದರೆ ಮಾಡಿದ್ರೆ ಹೋರಾಟ ಮಾಡಬೇಕಾಗುತ್ತೆ. ನಮ್ಮ ಸರಕಾರದ ಯೋಜನೆಯಿಂದ ಜನರು ಇಂದು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಐವನ್ ಡಿಸೋಜಾ ಹೇಳಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *