Header Ads
Header Ads
Header Ads
Breaking News

’ಸಂವಿಧಾನ ಉಳಿಸಿ’ ಧ್ಯೇಯದಡಿ ’ಸಂರಕ್ಷಣಾ ಸಮಾವೇಶ’ : ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ಆಯೋಜನೆ

ವಿಟ್ಲ: ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ “ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ” ಎಂಬ ಧ್ಯೇಯದಡಿಯಲ್ಲಿ ಬೃಹತ್ “ಸಂರಕ್ಷಣಾ ಸಮಾವೇಶ” ನಡೆಯಿತು.

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅವರು ಮಾತನಾಡಿ, ಫ್ಯಾಶಿಸಂ ಮತ್ತು ಬ್ಯಾಹ್ಮಣೀಯಂ ಎರಡು ಒಟ್ಟಾಗಿ ಸೇರಿಕೊಂಡು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಇದರಿಂದ ಮುಸ್ಲಿಮರು, ದಲಿತರಿಗೆ ಸಮಸ್ಯೆಯಾಗಿಲ್ಲ. ಬದಲಾಗಿ ನನ್ನ ಹಿಂದೂ ಸಹೋದರರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಹೇಳಿದರು.

ಭಾಷಣಕಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ಸಾರೇ ಜಹಾಂಸೆ ಅಚ್ಚ ಹಿಂದುಸ್ತಾನ್ ಹಮಾರ ಎಂದು ಹೇಳುವ ಅಸಲಿ ದೇಶ ಭಕ್ತರು ನಾವು. ದೇಶದ ಉಪರಾಷ್ಟ್ರಪತಿಗಳ ಕುಟುಂಬದವರಿಗೆ ದಾಖಲೆ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದಾಗ ಪಂಚರ್ ಹಾಕುವವರು ಎಲ್ಲಿಂದ ತರೋದು ಸ್ವಾಮಿ. ಸ್ವಾತಂತ್ರ್ಯ ಸೇನಾನಿಗೆ ಇಂತಹ ಸ್ಥಿತಿ ಬಂದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಹೇಳಿದರು.

ವೇದಿಕೆಯಲ್ಲಿ ಖತೀಬ್ ಮುಹಮ್ಮದಲಿ ಇರ್ಫಾನಿ ಫೈಝಿ, ಖಲಂದರ್ ಪರ್ತಿಪ್ಪಾಡಿ, ರಮಾನಾಥ ವಿಟ್ಲ, ಮುರಳೀಧರ ರೈ ಮಠಂತಬೆಟ್ಟು, ವಿಕೆಎಂ ಅಶ್ರಫ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *