Header Ads
Breaking News

ಸಂಸತ್ತಿನಲ್ಲಿ ಮೊಲೆ ಹಾಲು ಕುಡಿದ ಮಗು ಆಲಿಯಾ, ಆಸ್ಟ್ರೇಲಿಯಾ ಸಂಸತ್ ನಿಯಮಕ್ಕೆ ತಿದ್ದುಪಡಿ

ಸಂಸದೆ ಲಾರಿಸ್ಸಾ ವಾಟರ್ಸ್ ಅವರು ಆಸ್ಟ್ರೇಲಿಯಾದ ಸಂಸತ್ತಿನ ಮೇಲ್ಮನೆಯಲ್ಲಿ ಮಗುವಿಗೆ ಎದೆಹಾಲುಣಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ವಾಟರ್ಸ್ ಅವರು ಮಗುವಿನೊಂದಿಗೆ ಸಂಸತ್ತಿಗೆ ಬಂದಿದ್ದರು. ಸಂಸತ್ತಿನಲ್ಲಿ ಮೊದಲ ಬಾರಿಗೆ ಎದೆಹಾಲುಣಿಸುವ ಅವಕಾಶ ಪಡೆದಿದ್ದು ನನ್ನ ಮಗಳು ಅಲಿಯಾ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ವಾಟರ್ಸ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಜಾರಿಗೆ ಬಂದ ನೂತನ ನಿಯಮಾವಳಿಯಿಂದಾಗಿ ಸಂಸತ್ತಿನಲ್ಲಿ ಎದೆಹಾಲುಣಿಸುವ ಅವಕಾಶ ದೊರಕಿದೆ. ಸಂಸತ್ತನ್ನು ಕುಟುಂಬ ಸ್ನೇಹಿಯಾಗಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿತ್ತು. ೨೦೦೩ರಲ್ಲಿ ವಿಕ್ಟೋರಿಯಾದ ಸಂಸದೆ ಕಿರ್ಸ್ಟಿ ಮಾರ್ಷಲ್ ತಮ್ಮ ೧೧ ದಿನದ ಶಿಶುವಿಗೆ ಎದೆ ಹಾಲುಣಿಸಿದಕ್ಕಾಗಿ ಅವರನ್ನು ಸದನದಿಂದ ಹೊರಹಾಕಲಾಗಿತ್ತು.