Header Ads
Header Ads
Breaking News

ಸಂಸದರ ನಿಧಿಯಿಂದ ಕುಂಜತ್ತೂರು ಶಾಲೆಗೆ ಕಂಪ್ಯೂಟರ್ ಕೊಡುಗೆ

ಮಂಜೇಶ್ವರ: ಕಾಸರಗೋಡು ಸಂಸದ ಪಿ ಕರುಣಾಕರನ್ ರವರ ಅಭಿವೃದ್ಧಿ ಫಂಡ್‌ನಿಂದ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕುಂಜತ್ತೂರು ಮಾಡಗೆ ಲಭಿಸಿದ ಲ್ಯಾಪ್ ಟಾಪ್, ಕಂಪ್ಯೂಟರ್, ಪ್ರೊಜೆಕ್ಟರ್, ಪ್ರಿಂಟರ್‌ಗಳ ಉದ್ಘಾಟನೆಯನ್ನು ಸಂಸದ ಪಿ.ಕರುಣಾಕರನ್ ನೆರವೇರಿಸಿದರು.ಕುಂಜತ್ತೂರು ಶಾಲೆಯಲ್ಲಿ 92 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 59ವಿದ್ಯಾರ್ಥಿಗಳು ಕನ್ನಡ ಹಾಗೂ 33 ವಿದ್ಯಾರ್ಥಿಗಳು ಮಲಯಳಂ ಮಾದ್ಯಮಗಳಲ್ಲೂ ಕಲಿಯುತಿದ್ದಾರೆ.

s

ಅವರಿಗೆ ಕಂಪ್ಯೂಟರ್‌ನ ಪ್ರಯೋಜನ ಸಿಗಲಿದೆ.ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ್, ಡಾ.ಖಾದರ್, ಅಸಿಸ್ಟಂಟ್ ಎಜುಕೇಶನ್ ಆಫೀಸರ್ ದಿನೇಶ್, ಉದ್ಯಾವರ ಶ್ರೀ ದೈವಗಳ ಆಡಳಿತ ಮೋಕ್ತೆಸರ ರಾದ ದಯಾಕರ್ ಮಾಡ, ಎಸ್.ಎಸ್.ಜಿ ಅಧ್ಯಕ್ಷ ಹನೀಫ್.ಪಿ.ಎ, ಎಸ್.ಎಂ.ಸಿ ಅಧ್ಯಕ್ಷ ಹರೀಶ್ ಶಾಲೆಯ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ಭಟ್ ಮೊದಲಾದವರು ಉಪಸ್ಥರಿದ್ದರು

Related posts

Leave a Reply