Header Ads
Breaking News

ಸಂಸದೆ ಶೋಭಾ ಕರಂದ್ಲಾಜೆಗೆ ದುಬೈ ಮಸ್ಕತ್‍ನಿಂದ ಬರುತ್ತಿದೆ ಬೆದರಿಕೆ ಕರೆ : ಅಳಲು ತೋಡಿಕೊಂಡ ಸಂಸದೆ

ಸಂಸದೆ ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆಗಳು ಬರುತ್ತಿದ್ದು ದುಬೈ, ಮಸ್ಕತ್‍ನಿಂದ ನಿರಂತರ ಬೆದರಿಕೆ ಬಗ್ಗೆ ವೀಡಿಯೋದಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್‍ನಲ್ಲಿ ಹಲ್ಲೆ ಮಾಡಿದ್ದಾರೆ. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೆ.
ನನಗೆ ದಿನನಿತ್ಯ ನೂರಾರು ಬೆದರಿಕೆ ಕರೆಗಳು ಬರುತ್ತಿದೆ ಹಲವಾರು ಅಶ್ಲೀಲ ಕರೆಗಳು ಬರುತ್ತಿದೆ ಹಲವಾರು ಜನ ದುರುದ್ದೇಶದಿಂದ ಫೋನ್  ಮೇಲೆ ಫೋನ್  ಮಾಡುತ್ತಿದ್ದಾರೆ. ಒಂದೂವರೆ ತಿಂಗಳಿಂದ ಒಂದು ದಿನಾನೂ ನಾನು ವಿಶ್ರಾಂತಿಯನ್ನು ಪಡೆದಿಲ್ಲ ಎಂದಿದ್ದಾರೆ.

ನಾನು ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಕೊರೊನಾ ಸಂದರ್ಭ ಅಕ್ಕಿ ದವಸ ಧಾನ್ಯಗಳನ್ನು ನಿರಂತರವಾಗಿ ವಿತರಿಸಿದ್ದೇನೆ. ಒಂದು ದಿನಾನೂ ನಾನು ವಿಶ್ರಾಂತಿಯನ್ನು ತೆಗೆದುಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ವಿಚಾರ ಹರಿದಾಡುತ್ತಿದೆ . ವಾಯ್ಸ್ ರೆಕಾರ್ಡ್ ಹರಿಯುತ್ತಿರುವುದರಿಂದ ನನಗೆ ಯಾವುದೇ ಬೇಸರ ಇಲ್ಲ. ದುಬೈ ಮಸ್ಕತ್ ಮಧ್ಯ ಪ್ರಾಚ್ಯ ದೇಶದಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ. ವಾಯ್ಸ್ ರೆಕಾರ್ಡ್ ನ ಹಿಂದಿರುವ ದುರುದ್ದೇಶವನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಿ . ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ . ಲಾಕ್‍ಡೌನ್ ಸಂದರ್ಭ ನಾನಂತೂ ವಿಶ್ರಾಂತಿಯನ್ನು ತೆಗೆದುಕೊಂಡಿಲ. ಪೊಲೀಸ್ರಿಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದೇವೆ. ಕರೆ ಮಾಡಿದ ಆರೋಪಿಗಳನ್ನು ಈವರೆಗೆ ಪೊಲೀಸ್ರು ಪತ್ತೆ ಹಚ್ಚಿಲ್ಲ ದೆಹಲಿ ಪೊಲೀಸ್ರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Related posts

Leave a Reply

Your email address will not be published. Required fields are marked *