Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕುಂದಾಪುರದ ಡೀಮ್ಡ್ ಫಾರೆಸ್ಟ್‌ನಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ತಹಶೀಲ್ದಾರ್ ನೇತೃತ್ವದಲ್ಲಿ ಗುಡಿಸಲುಗಳ ತೆರವು

ಕುಂದಾಪುರದ ಡೀಮ್ಡ್ ಫಾರೆಸ್ಟ್‌ನಲ್ಲಿ ಅಕ್ರಮವಾಗಿ ಗುಡಿಸಲುಗಳನ್ನ ಹಾಕಿದ್ದ 147 ಕುಟುಂಬಗಳನ್ನ ತಹಶೀಲ್ದಾರ್ ನೇತೃತ್ವದಲಿ ತೆರವುಗೊಳಿಸಲಾಯಿತು. 2017 ರ ಅಕ್ಟೋಬರ್ 31 ರಂದು ರಾತ್ರಿ ಏಕಾ‌ಏಕಿ ಹತ್ತರಿಂದ ಹದಿನೈದು ಕುಟುಂಬಗಳು ಏಕಾ‌ಏಕಿ ಸರ್ವೆ ನಂ 157 ರಲ್ಲಿ ಗುಡಿಸಲುಗಳನ್ನ ಹಾಕಿಕೊಂಡಿದ್ದವು. ಈ ವಿಚಾರ ತಿಳಿದ ತಹಶೀಲ್ದಾರ್ ಅಂದು ಬಂದು ಎಚ್ಚರಿಕೆ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದಲ್ಲದೆ ಲಿಖಿತ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಆದರೂ ಕೂಡ ಇಲ್ಲಿಂದ ತೆರವುಗೊಳಿಸದೇ ಇದ್ದ ಕಾರಣ ಪೊಲೀಸರ ಸಹಕಾರದೊಂದಿಗೆ ತಹಶೀಲ್ದಾರ್ ಜೆಸಿಬಿ ತೆರವುಗೊಳಿಸಿದ್ದಾರೆ.

ಕೃಷಿ ಕೂಲಿಕಾರರ ಸಂಘಟನೆಯ ಮುಖಂಡರು ಸ್ಥಳದಲ್ಲಿ ಒತ್ತುವರಿ ತೆರವುಗೊಳಿಸುತ್ತಿರುವುದನ್ನ ವಿರೋಧಿಸಿದ ಹಿನ್ನೆಲೆ, ಪ್ರತಿಭಟಿಸಿದವರನ್ನ ವಶಕ್ಕೆ ಪಡೆದು, ಕಂಡ್ಲೂರು ಠಾಣೆಯಲ್ಲಿ ಇರಿಸಲಾಗಿದೆ.
ಕಂದಾವರ ಗ್ರಾಮಪಂಚಾಯತ್ ವಿ.ಎ ನಿಮಗೆ ಇಲ್ಲಿ ಜಾಗ ನೀಡುತ್ತೇವೆ ಎಂದು ಹೇಳಿ ಸೋಮವಾರ ಸಹಿ ತೆಗೆದುಕೊಂಡಿದ್ದು, ಇಂದು ಬಂದು ತೆರವುಗೊಳಿಸುತ್ತಿದ್ದಾರೆ. ಅನಕ್ಷರಸ್ಥರಾದ ನಮ್ಮ ಬಳಿ ಸುಳ್ಳು ಹೇಳಿ ಸಹಿ ತೆಗೆದುಕೊಂಡಿದ್ದಾರೆ ಎಂದು ಗುಡಿಸಲು ಹಾಕಿಕೊಂಡವರು ಆರೋಪಿಸಿದರು.

ಕಂದಾವರದಲ್ಲಿ ಗುಡಿಸಲು ಹಾಕಿಕೊಂಡವರಲ್ಲಿ ಎಲ್ಲರೂ ನಿವೇಶನರಹಿತರಾಗಿರಲಿಲ್ಲ. ಹಲವು ಮಂದಿ ಆಸ್ತಿ ಪಾಸ್ತಿ ಇದ್ದವರೂ ಕೂಡ ಅಲ್ಲಿ ನಿವೇಶನಕ್ಕಾಗಿ ಗುಡಿಸಲು ಕಟ್ಟಿಕೊಂಡಿದ್ದರು ಎನ್ನುವುದು ಕಂಡು ಬಂತು. ಆದರೂ ನಿವೇಶನ ರಹಿತರ ಸಂಖ್ಯೆ ಹೆಚ್ಚಾಗಿತ್ತು.

ಘಟನಾ ಸ್ಥಳದಲ್ಲಿ ಕೆಲವು ದುಷ್ಕರ್ಮಿಗಳು ಗುಡಿಸಲುಗಳಿಗೆ ಬೆಂಕಿ ಹಾಕಿ, ಪ್ರಕರಣದ ದಿಕ್ಕುತಪ್ಪಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ. ತಕ್ಷಣ ಸ್ಥಳಕಕ್ಕಾಗಮಿಸಿದ ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದ ಘಟನೆ ಕೂಡ ನಡೆದಿದೆ.

ಕೆಲ ಮುಖಂಡರು ನಿವೇಶನ ಕೊಡಿಸುತ್ತೇನೆಂದು ಹಣವನ್ನ ತೆಗೆದುಕೊಂಡಿದ್ದು, ನಿವೇಶನನೂ ಇಲ್ಲ ಹಣವೂ ಇಲ್ಲ. ಎಂದು ಅಕ್ರಮ ನಿವಾಸಿಗಳು ದುಃಖಿಸುತ್ತಿರುವುದು ಕಂಡು ಬಂತು. ಸುಮಾರು 7 ಸಾವಿರ ರು. ಹಣವನ್ನ ಕೆಲ ಮುಖಂಡರೆನಿಸಿಕೊಂಡವರು ತೆಗೆದುಕೊಂಡಿರುವುದಾಗಿ ಆರೋಪಿಸಲಾಗಿದ್ದು. ಆದರೆ ಹಣ ತೆಗೆದುಕೊಂಡವರು ಮಾತ್ರ ಆ ಜಾಗದತ್ತ ಸುಳಿದೇ ಇಲ್ಲ ಎನ್ನುವ ಆರೋಪ ಕೂಡ ಕೇಳಿ ಬಂತು.

ತೆರವು ಕಾರ್‍ಯಾಚರಣೆ ಹಿನ್ನೆಲೆ ಕಂದಾವರದಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸಲಾಗಿದ್ದು, ಕಂದಾವರಕ್ಕೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನ ಕೈಗೊಳ್ಳಲಾಗಿತ್ತು. ಡಿವೈ‌ಎಸ್‌ಪಿ ಪ್ರವೀಣ್ ನಾಯಕ್, ವೃತ್ತನಿರೀಕ್ಷಕ ಮಂಜಪ್ಪ, ಪಿ‌ಎಸ್‌ಐಗಳಾದ ಹರೀಶ್, ಶ್ರೀಧರ್ ನಾಯಕ್, ಶೇಖರ್, ಸುನೀಲ್ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

Related posts

Leave a Reply