Header Ads
Breaking News

ಸಂಸದ ನಳಿನ್ ಕುಮಾರ್ ವೈಫಲ್ಯಗಳ ಸರದಾರ: ಕಾಂಗ್ರೆಸ್ ವಕ್ತಾರ ಎಸಿ ವಿನಯರಾಜ್ ಟೀಕೆ

ಸಂಸದರಾದ ನಳಿನ್ ಕುಮಾರ್ ಕಟೀಲು ವೈಫಲ್ಯಗಳ ಸರದಾರ. ಕಳಪೆ ಸಾಧನೆಯಿಂದಾಗಿ ಮಂಗಳೂರು ಅಭಿವೃದ್ಧಿಯಾಗಿಲ್ಲ, ಬಂಟ್ವಾಳ- ಅಡ್ಡಹೊಳೆ ರಸ್ತೆ ಕಾಮಗಾರಿ ಕುಠಿತವಾಗಿದೆ.

ಮಂಗಳೂರು ನಗರದ ಬೆಳವಣಿಗೆಗೆ ಹೊಡೆತ ಬಿದ್ದಿದೆ ಎಂದು ಕಾಂಗ್ರೆಸ್ ವಕ್ತಾರ ಎ.ಸಿ ವಿನಯರಾಜ್ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಂಸದರು ಸುಳ್ಳುಗಾರ, ಮಾತಿನಲ್ಲಿ ಸತ್ಯಾಂಶವಿಲ್ಲ, ಟೋಲ್ ವಿರುದ್ಧ ಹೋರಾಟ ಮಾಡಲು ಧನಾತ್ಮಕ ಅಂಶವಿಲ್ಲ ಎಂದು ಹೇಳಿದರು. ಇನ್ನು ಪಂಪ್ವೆಲ್ – ತೊಕ್ಕೊಟ್ಟು ಫ್ಲೈಓವರ್ ನೆನೆಗುದಿಗೆ ಬಿದ್ದು, ಎಂಟು ವರುಷಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಮಂಗಳೂರು ಅಭಿವೃದ್ಧಿ ಕುಂಠಿತವಾಗಿದೆ. ಜನರನ್ನ ಭಾವನ್ಮಾತಕ ಕೆರಳಿಸಿ ಮತಪಡೆಯಲು ಯತ್ನ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಸಂಸದರ ವಿರುದ್ಧ ಎ.ಸಿ.ವಿನಯರಾಜ್ ಆರೋಪ ಮಾಡಿದರು.

Related posts

Leave a Reply

Your email address will not be published. Required fields are marked *