Header Ads
Header Ads
Breaking News

ಸಂಸ್ಕೃತಿ ಉಳಿಯ ಬೇಕಾದರೆ ಸಂಸ್ಕಾರ ಅಗತ್ಯತೆ ಇದೆ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿಕೆ

ವಿಟ್ಲ: ಸಮಾಜೋನ್ನತಿಯ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದಾಗ ಆ ಸೇವೆಯನ್ನು ವೈಭವವಾಗುತ್ತದೆ. ಸಮಾಜದಲ್ಲಿ ಅರ್ಹರನ್ನು ಗುರುತಿಸಿ ಸೇವೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಸಂಸ್ಕೃತಿ ಉಳಿಯ ಬೇಕಾದರೆ ಸಂಸ್ಕಾರ ಅಗತ್ಯತೆ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜು.29ರಂದು ನಡೆಯುವ ಶ್ರೀ ಒಡಿಯೂರು ಗ್ರಾಮೋತ್ಸವದ 2019ರ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು. ಸಂತ ಹಾಗೂ ಸಮಾಜ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜ ಹಿತವನ್ನು ಕಾಪಾಡುವ ಜವಾಬ್ದಾರಿ ಸಂತನಿಗಿದೆ. ಸಮಾಜದಿಂದ ಸಮಾಜಕ್ಕಾಗಿ ಸಮಾಜಕ್ಕೋಸ್ಕರ ಎಂಬ ರೀತಿಯಲ್ಲಿ ಗ್ರಾಮೋತ್ಸವದ ಕಾರ್ಯಗಳು ನಡೆಯುತ್ತದೆ. ಸಮಾಜ ಮುಖಿಯಾಗಿ ಕೆಲಸ ಮಾಡುವ ಸಂಘಟನೆಗಳು ಬೆಳೆಯಲು ಸಾಧ್ಯ ಎಂದರು.

ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಜಿ. ತಾಳಿಪ್ಪಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಸದಾನಂದ ಅಳಿಕೆ, ಪ್ರಧಾನ ಕೋಶಾಧಿಕಾರಿ ಎ. ಅಶೋಕ್ ಕುಮಾರ್ ಬಿಜೈ, ಜತೆ ಕೋಶಾಧಿಕಾರಿಗಳಾದ ಎ. ಸುರೇಶ ರೈ ಮಂಗಳೂರು, ಲಿಂಗಪ್ಪ ಗೌಡ ಪನೆಯಡ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *