Header Ads
Header Ads
Breaking News

ಸಚಿವರಿಗೆ ಭಯೋತ್ಪಾದಕ ಎಂದಿರುವ ಬಿಜೆಪಿ ನಾಯಕ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಹೇಳಿಕೆಗೆ ಆಕ್ರೋಶ ಸಹಾಯಕ ಪೊಲೀಸ್ ಆಯುಕ್ತರಲ್ಲಿ ದೂರು ಸಲ್ಲಿಸಿದ ಕಾಂಗ್ರೆಸ್ಸಿಗರು

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರನ್ನು ಉಗ್ರಗಾಮಿಗಳೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್‍ಯದರ್ಶಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಸಹಾಯಕ ಪೊಲೀಸ್ ಆಯುಕ್ತರಲ್ಲಿ ದೂರು ಸಲ್ಲಿಸಲಾಯಿತು.


ನಿಯೋಗದಲ್ಲಿ ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪ್ರ.ಕಾ.ಗಳಾದ ನಾಸಿರ್ ಸಾಮಣಿಗೆ, ಗೋಪಾಲ್ ತಚ್ಚಣಿ, ಯುವಕಾಂಗ್ರೆಸ್ ಸಂಘಟನಾ ಕಾರ್‍ಯದರ್ಶಿ ಅನ್ಸಾಫ್ ಸಿಲಿಕೋನಿಯ,ಯುವಕಾಂಗ್ರೆಸ್ ಉಪಾಧ್ಯಕ್ಷ ರಿಯಾಝ್ ಅಹಮ್ಮದ್ ಪಾವೂರು, ಸಮೀರ್ ಪಜೀರ್, ಅವಿಲ್ ತೊಕ್ಕೊಟ್ಟು, ರಿವೇನ್ ಸೋಮೇಶ್ವರ, ಅಶ್ರಫ್ ಕೋಟೆಪುರ ಉಪಸ್ಥಿತರಿದ್ದರು. 

Related posts

Leave a Reply