Header Ads
Header Ads
Breaking News

ಸಚಿವ ಪ್ರಮೋದ್ ವಿರುದ್ಧ ವಂಚನೆ ಆರೋಪ: ಬ್ಯಾಂಕ್  ದಾಖಲೆಗಾಗಿ ಆರ್‌ ಟಿಐ ಅರ್ಜಿ ಸಲ್ಲಿಸಿದ ಅಬ್ರಹಾಂ

ಸಿಂಡಿಕೇಟ್ ಬ್ಯಾಂಕ್ ಮೂಲಕ ಅಕ್ರಮವಾಗಿ ಸಾಲ ಪಡೆದಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಸೇವಾ ವಿಭಾಗಕ್ಕೆ ದೂರು ಸಲ್ಲಿಸಿದ್ದ ಸಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಇಂದು ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿದರು.

ಬ್ಯಾಂಕ್ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲು ಆಗಮಿಸಿದ್ದ ಅಬ್ರಹಾಂ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಮೋದ್ ಮಧ್ವರಾಜ್ ರೇ ನೀವು ನಿರಪರಾಧಿ ಎಂದು ದಾಖಲೆ ಬಿಡುಗಡೆ ಮಾಡಿ ಅಂತ ಸವಾಲು ಹಾಕಿದರು.

ಪ್ರಮೋದ್ ಸಮರ್ಥನೆಗೆ ಸಿಂಡಿಕೇಟ್ ಬ್ಯಾಂಕ್ ನಿಂತಿದೆ.ಬ್ಯಾಂಕ್ ಗೆ ಪ್ರಮೋದ್ ರನ್ನು ಸಮರ್ಥಿಸುವ ಆಸಕ್ತಿ. ಬ್ಯಾಂಕ್ ಸುಳ್ಳು ಹೇಳುತ್ತಿದೆ ನನ್ನ ಆರೋಪ ಸುಳ್ಳು ಎಂದು ಸಾಭೀತುಮಾಡಿ ಇಲ್ಲಾ ಅಂದ್ರೆ ಬ್ಯಾಂಕ್ ಮೇಲೆ ಐದು ಕೋಟಿಮಾನ ನಷ್ಟ ಮೊಕದ್ದಮೆ ಹಾಕ್ತೇನೆ ಎಂದು ಎಚ್ಚರಿಸಿದರು.