Header Ads
Header Ads
Breaking News

ಸಚಿವ ಯು.ಟಿ. ಖಾದರ್‌ಗೆ ಸಾರ್ವಜನಿಕ ಅಭಿನಂದನೆ ಮಂತ್ರಿಯಾಗಿ ಹಲವಾರು ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿದೆ ಅಭಿನಂದನೆ ಸ್ವೀಕರಿಸಿ ಸಚಿವ ಖಾದರ್ ಹೇಳಿಕೆ

ಮಂತ್ರಿ ಪದವಿ ಸಿಕ್ಕ ಬಳಿಕ ಸದನದಲ್ಲಿ ಮೊದಲ ಚರ್ಚೆಯಲ್ಲಿ ಗುಟ್ಕಾ ನಿಷೇಧಿಸಿದ್ದು ರಾಜ್ಯಾದ್ಯಂತ ಬಲು ದೊಡ್ಡ ಚರ್ಚೆಯಾಗಿತ್ತು. ಪ್ರತಿಪಕ್ಷ ಅನುಭವದ ಕೊರತೆ ಎಂಬ ಆರೋಪ ಹೊರಿಸಿತ್ತು. ಆದರೆ ಜನರ ಪ್ರತಿಪಕ್ಷದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟ ಬಳಿಕ ಮಂತ್ರಿಯಾಗಿ ಬಹಳಷ್ಟು ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿದೆ. ನನ್ನ ಶಾಸಕತ್ವದ ಅವಧಿಯಿಂದಲೇ ಅಭಿವೃದ್ಧಿಯೇ ನನ್ನ ಗುರಿಯಾಗಿಸಿಕೊಂಡಿದ್ದೇನೆ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾರ್ಯಕರ್ತರು ಆಯೋಜಿಸಿದ ಸಚಿವ ಯು. ಟಿ. ಖಾದರ್ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕಿಡ್ನಿ ಟ್ರಾನ್ಸ್ ಪ್ಲೆಂಟ್ ಗೆ ಜೀವನ ಪೂರ್ತಿ ಚಿಕಿತ್ಸೆ ಸೌಲಭ್ಯ ದೊರಕಿಸಿ ಕೊಡಲಾಗಿದೆ. ರೇಶನ್ ಕಾರ್ಡ್ ವಿತರಣೆ ಸಮಸ್ಯೆ ನೀಗಿಸಲಾಗಿದೆ. ಎಪಿಎಲ್ ಬಿಪಿಎಲ್ ಅಂತರ ಬಹಳಷ್ಟಿದ್ದು ಅದನ್ನು ಸಮರ್ಪಕವಾಗಿ ನೀಗಿಸಲಾಗಿದೆ.

ಕಡಿಮೆ ವೇತನಕ್ಕೆ ದುಡಿಯುವ ಜನರಿಗೆ ಬಿಪಿಎಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.ಬಂಟ್ವಾಳ ತಾಲೂಕ ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಮುಡಿಪು ಚರ್ಚ್ ನ ಬೆಂಜಮಿನ್ ಪಿಂಟೋ, ಪೊಲದವರ ಯಾನೆ ಗಟ್ಟಿ ಸಮಾಜದ ಅಧ್ಯಕ್ಷವಿಶ್ವನಾಥ ಗಟ್ಟಿ ವಗ್ಗ, ಮುಡಿಪು ವಿಶ್ವಕರ್ಮ ಸಮಾಜದ ಪ್ರತಿನಿಧಿ ಗಿರೀಶ್ ಆಚಾರ್ಯ ಕೈರಂಗಳ ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply