Header Ads
Header Ads
Breaking News

ಸಚಿವ ರಮಾನಾಥ ರೈ ಅವರನ್ನು ಸನ್ಮಾನಿಸಿದ ಕೊಳ್ನಾಡು ನಾಗರಿಕರು

ವಿಟ್ಲದ ಕೊಳ್ನಾಡು ಗ್ರಾಮಕ್ಕೆ 70ಕೋಟಿಗಿಂತಲೂ ಅಧಿಕ ಅನುದಾನವನ್ನು ಒದಗಿಸಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಸಾಲೆತ್ತೂರಿನ ಸಭಾಭವನದಲ್ಲಿ ಕೊಳ್ನಾಡು ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಸಮಾರಂಭ ನಡೆಯಿತು.

ಕೊಳ್ನಾಡು ಗ್ರಾಮ ಪಂಚಾಯಿತಿ ಕಚೇರಿಯಿಂದ ತೆರೆದ ವಾಹನದಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಸಾಲೆತ್ತೂರು ಮೈದಾನಕ್ಕೆ ಕರೆತರಲಾಯಿತು. ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ರಮಾನಾಥ ರೈ ಅವರು ಆರು ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕಾರ್‍ಯಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎನ್ನು ಆತ್ಮ ತೃಪ್ತಿ ನನಗಿದೆ. ಜನರೂ ಸಹ ನನ್ನ ಕರ್ತವ್ಯವನ್ನು ಮನಗಂಡಿದ್ದಾರೆ ಎನ್ನುವ ಭರವಸೆಯಿದೆ. ನನ್ನ ಮೂಲಕ ಆದ ಕೆಲಸವನ್ನು ನಾನೇ ಮಾಡಿದ್ದೇನೆ ಎಂದು ಹೇಳುವ ಎದೆಗಾರಿಕೆ ನನ್ನಲ್ಲಿದೆ. ಆದರೆ ಬೇರೆ ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ರಾಜಕೀಯ ದುರುದ್ದೇಶದಿಂದ ಜನರಿಗೆ ಸುಳ್ಳು ಹೇಳುವ ದುಸ್ಥಿತಿ ಬಂದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಚರ್ಚ್ ಧರ್ಮಗುರು ಹೆನ್ರಿ ಡಿಸೋಜ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ. ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ರೇಖಾದಾಸ್ ಶೆಟ್ಟಿ, ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷಣ ಗೌಡ, ಮಾಜಿ ಸದಸ್ಯರುಗಳಾದ ಮಾಧವ ಮಾವೆ, . ಸಾಮಾಜಿಕ ಕಾರ್‍ಯಕರ್ತ ಕೈಯ್ಯೂರು ನಾರಾಯಣ ಭಟ್, ದೇವಿಕಾ ಆರ್.ರೈ, ಮಹಮ್ಮದ್ ಸಾಲೆ, ಕನ್ಯಾನ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್‌ರಹಿಮಾನ್, ಲೋಕೋಪಯೋಗಿ ಇಲಾಖೆಯ ಕಾರ್‍ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಸಹಾಯಕ ಇಂಜಿನಿಯರ್‌ಗಳಾದ ನರೇಂದ್ರಬಾಬು, ಮಾಜಿ ಡಿಹೆಚ್‌ಒ ರಾಮಕೃಷ್ಣ ರಾವ್, ತಾಲೂಕು ವೈದಾಧಿಕಾರಿ ಡಾ. ದೀಪಾ ರಾವ್, ರಾಮಚಂದ್ರ ಶಾಸ್ತ್ರಿ, ಬಾಪಕುಂಞಿ, ವಿಜಯ ಆಚಾರ್, ಜಯಾನಂದ, ಚಂದ್ರಶೇಖರ್ ಪೂಜಾರಿ, ಮಂಜುನಾಥ ರೈ, ಆರ್‌ಐ ದಿವಾಕರ್ ಇನ್ನಿತರರು ಇದ್ದರು.

Related posts

Leave a Reply