Header Ads
Header Ads
Breaking News

ಸಚಿವ ರಹೀಂ ಖಾನ್‌ರಿಂದ ಮನಪಾ ಈಜುಕೊಳ ಕಾಮಗಾರಿ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ಕಾಮಗಾರಿಯನ್ನಸಚಿವ ರಹಿಂ ಖಾನ್ ವೀಕ್ಷಿಸಿದರು. ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು. ತದ ಬಳಿಕ ಮಂಗಳಾ ಸಿಮ್ಮಿಂಗ್ ಫುಲ್ ಕ್ಲಬ್ ನವರು ಸಚಿವರಿಗೆ ಎಮ್ಮೆಕೆರೆ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜು ಸಂಕೀರ್ಣದ ಕಾಮಗಾರಿಯನ್ನ ಶೀಘ್ರದಲ್ಲೇ ಮುಗಿಸಬೇಕೆಂದು ಮನವಿ ಸಲ್ಲಿಸಿದರು.ಈ ಕುರಿತು ಮಾತನಾಡಿದ ಮಂಗಳಾಸಿಮ್ಮಿಂಗ್ ಕ್ಲಬ್ ಕಾರ್ಯದರ್ಶಿ ಎಂ.ಶಿವಾನಂದ ಗಟ್ಟಿ , ಕ್ರೀಡಾಪಟುಗಳಿಗೆ ಇನ್ನಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನ ಶೀಘ್ರದಲ್ಲೇ ಆರಂಭ ಮಾಡಬೇಕೆಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಸಂಬಂಧ ಬೆಂಗಳೂರಲ್ಲಿ ಸಭೆ ನಡೆಸಲಾಗುವುದು ಅಂತಾ ತಿಳಿಸಿದರು. ಇನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕ ರೀತಿಯಲ್ಲಿ ಸ್ಪಂದನೆ ಮಾಡುವ ವಿಶ್ವಾಸವಿದೆ ಅಂತಾ ಹೇಳಿದರು.
ಮನವಿ ಸಲ್ಲಿಸುವ ವೇಳೆ ತರಬೇತುದಾರ ಲೋಕರಾಜ್ ವಿಟ್ಲ, ಸದಸ್ಯರಾದ ರಾಜೇಶ್ ಹೆಬ್ಬಾರ್, ಆಶ್ವಿನಿಕುಮಾರ್, ಧನಂಜಯ್,ನವೀನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply