Header Ads
Breaking News

ಸಜಿಪನಡು ಕಂಚಿನಡ್ಕ ಪದವಿನ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.

ಸಾಮಾನ್ಯವಾಗಿ ರುದ್ರಭೂಮಿಯೆಂದರೆ ಭಯಪಟ್ಟುಕೊಳ್ಳುತ್ತಾರೆ. ಮಹಿಳೆಯರಂತೂ ಇತ್ತ ಕಾಲಿಡುವುದೇ ಅಪರೂಪ. ಆದರೆ, ಇಲ್ಲಿ ಯಾವುದೇ ಭಯವಿಲ್ಲದೇ ಮಧ್ಯರಾತ್ರಿಯವರೆಗೂ ಗುಂಪುಗುಂಪಾಗಿ ಜನಜಮಾಯಿಸಿ, ದೇವ ಸಂಕೀರ್ತನೆಯಲ್ಲಿ ಪಾಲ್ಗೊಂಡುಬೃಹತ್ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.
ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಭಜನಾ ಸಂಕೀರ್ತನೆ ದೇವಭೂಮಿ ಎಂಬ ನಾಮವನ್ನು ಸಾಕ್ಷೀಕರಿಸಿತು. ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ, ಇಂತಹಾ ಪವಿತ್ರ ಸ್ಥಳ ಶಿವನ ಸಾನಿಧ್ಯವೂ ಇದೆ. ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದ್ದಾರೆ. ಭಜನಾ ಸಂಕೀರ್ತನೆಯಲ್ಲಿ ತಾಲೂಕಿನ ಸುಮಾರು 12ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿದವು. ಒಟ್ಟಿನಲ್ಲಿ ಸ್ಮಶಾನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಮಹಾಶಿವರಾತ್ರಿಯ ಸಂಭ್ರಮ ಯಶಸ್ವಿಯಾಯಿತು.
ವರದಿ: ತಾರನಾಥ್

Related posts

Leave a Reply

Your email address will not be published. Required fields are marked *