

ನಿನ್ನೆ ಸಂಜೆ ಘೋಷಿಸಿದ್ದ ಸಣ್ಣ ಉಳಿತಾಯಗಳ ಯೋಜನೆಗಳ ಮೇಲಿನ ಬಡ್ಡಿದರಗಳ ಮೇಲಿನ ಭಾರೀ ಕಡಿತಯನ್ನು ಕೇಂದ್ರ ಸರಕಾರ ಇಂದು ಹಿಂದಕ್ಕೆ ಪಡೆದಿದೆ. ಕಣ್ತಪ್ಪಿನಿಂದ ಹೊರಡಿಸಲಾಗಿರುವ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅಥವಾ ಎನ್ಎಸ್ಸಿ ಹಾಗೂ ಸಾರ್ವಜನಿಕ ಭವಿ? ನಿಧಿ ಅಥವಾ ಪಿಪಿಎಫ್ ಯೋಜನೆಗಳಲ್ಲಿನ ಮೇಲಿನ ಬಡ್ಡಿ ಕಡಿತವು ಲಕ್ಷಾಂತರ ಮಧ್ಯಮ ವರ್ಗದ ಠೇವಣಿದಾರರಿಗೆ ನೋವುಂಟು ಮಾಡಿತ್ತು. ಭಾರತ ಸರಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು2020-21ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ಅಂದರೆ 2021ರ ಹೊತ್ತಿಗೆ ಇದ್ದ ದರಗಳಲ್ಲಿ ಮುಂದುವರಿಯುತ್ತದೆ. ಕಣ್ತಪ್ಪಿನಿಂದ ಹೊರಡಿಸಲಾಗಿರುವ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.