Breaking News

ಸಣ್ಣ ಬೆಂಕಿ ಅವಘಡ ತೊಡೆಯುವ ತಂತ್ರಜ್ಞಾನ, ಪುತ್ತೂರು ಬೆಂಕಿ ನಂದಿಪ ಠಾಣೆಗೆ ಬುಲೆಟ್


ಸಣ್ಣ ಪುಟ್ಟ ಬೆಂಕಿ ಅವಘಡದ ವೇಳೆ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಅಗ್ನಿಶಾಮಕ ಠಾಣೆಗೆ ಮಿಸ್ಟ್ ತಂತ್ರಜ್ಞಾನದ ಬುಲೆಟ್ ಮಾದರಿಯ ಬೈಕ್ ಕಾಲಿಟ್ಟಿದೆ.
ಈಗಾಗಲೇ ಎರಡು ಫೈರ್ ಟೆಂಡರ್ ಮತ್ತು ೧ ರಿಸ್ಕೀ ಟೆಂಡರ್ ವಾಹನ ಇರುವ ಇಲ್ಲಿ ನಾಲ್ಕನೆಯ ವಾಹನವಾಗಿ ಬುಲೆಟ್ ಸೇರ್ಪಡೆಗೊಂಡಿದೆ.
ತುರ್ತು ಅಗ್ನಿಶಮನದ ಸಂದರ್ಭ, ಇಕ್ಕಟ್ಟಾದ ಸ್ಥಳದಲ್ಲಿ ಸಂಚಾರಕ್ಕೆ ಈ ಬುಲೆಟ್ ಬೈಕ್ ಬಳಕೆಯಾಗಲಿದೆ. ರಾಯಲ್ ಎನ್ಫೀಲ್ಡ್ನ ೩೫೦ ಸಿಸಿ ಸಾಮರ್ಥ್ಯದ ಬೈಕ್ ಅನ್ನು ಬೆಂಕಿ ನಂದಕ ಬುಲೆಟ್ ಆಗಿ ಪರಿವರ್ತಿಸಲಾಗಿದೆ. ಬೈಕ್ನ ಹಿಂಭಾಗದಲ್ಲಿ ಹತ್ತು ಲೀಟರ್ ಸಾಮರ್ಥ್ಯದ ಫೋಮ್ ದ್ರಾವಣ ತುಂಬಿರುವ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸುತ್ತ ಸಣ್ಣ ಗಾತ್ರದ ೨ ಕೆಜಿ ಸಾಮರ್ಥ್ಯದ ಏರ್ ಸಿಲಿಂಡರ್ ಇದೆ. ಪಕ್ಕದಲ್ಲಿರುವ ಹೈಡ್ರಾಲಿಕ್ ಉಪಕರಣ ಸಿಲಿಂಡರ್ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಜತೆಗೆ ಬೈಕ್ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಧ್ವನಿವರ್ಧಕ, ಕೆಂಪು ದೀಪಗಳಿವೆ.
ಗ್ಯಾಸ್ ಸೋರಿಕೆ, ವಿದ್ಯುತ್ ಶಾರ್ಟ್ ಸರ್ಕ್ನೂಟ್, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹಾಗೂ ಇತರೆ ಬೆಂಕಿ ಅವಘಡ ಸಂಭವಿಸಿದಾಗ ಇದನ್ನು ಬಳಸಲಾಗುತ್ತದೆ. ಅಗ್ನಿಶಾಮಕ ದಳದ ದೊಡ್ಡ ಗಾತ್ರದ ವಾಹನಗಳು ಇಕ್ಕಟ್ಟಾದ ಸ್ಥಳದಲ್ಲಿ ಸಂಚರಿಸುವುದು ತ್ರಾಸದಾಯಕವಾಗಿರುವ ಕಾರಣ, ಈ ಬುಲೆಟ್ ವಾಹನ ಶೀಘ್ರ ಸ್ಪಂದನೆಗೆ ಅನುಕೂಲ ಎಂಬ ಕಾರಣ ಹೊಂದಲಾಗಿದೆ.

Related posts

Leave a Reply