Header Ads
Header Ads
Header Ads
Breaking News

ಸತ್ತೇ ಹೋಗಿದ್ದ ಹಾವಿಗೆ ಮರು ಜೀವ ಉಡುಪಿಯ ಸರಳೇಬೆಟ್ಟಿನಲ್ಲಿ ಘಟನೆ ಮರುಜೀವ ಪಡೆಯುವ ಹಾವಿನ ವಿಡಿಯೋ ವೈರಲ್

ವಿಷಕಾರಿ ನಾಗರಹಾವೊಂದು ಬಲೆಯೊಂದಕ್ಕೆ ಸಿಲುಕಿ, ಒದ್ದಾಡಿ ಸತ್ತೆ ಹೋಯ್ತು ಅನ್ನೊವಷ್ಟರಲ್ಲಿ ಮತ್ತೆ ಜೀವ ಪಡೆದುಕೊಂಡು ಬುಸುಗುಟ್ಟಿ, ಜನರನ್ನ ಆಶ್ಚರ್ಯ ಚಕಿತರನ್ನಾಗಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿಯ ಸರಳೆಬೆಟ್ಟು ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಒಣಗಿಸಲು ಹಾಕಿದ್ದ ಕೊಬ್ಬರಿಗೆ, ರಕ್ಷಣೆಗೆಂದು ಹಾಕಲಾಗಿದ್ದ ಬಲೆಗೆ ನಾಗರಹಾವೊಂದು ಸಿಲುಕಿ ಹಾಕಿಕೊಂಡಿತ್ತು. ಸಿಲುಕಿಕೊಂಡಿದ್ದ ಹಾವು ಬಲೆಯಿಂದ ಬಿಡಿಸಿಕೊಳ್ಳಲು ಸಾಕಾಷ್ಟು ಪ್ರಯತ್ನ ಪಟ್ಟಿದೆ. ಎಷ್ಟೇ ಕೊಸರಾಡಿದರು ಬಿಡಿಸೋಕೆ ಸಾಧ್ಯವಾಗಿರಲಿಲ್ಲ. ನಾಗರಹಾವಿನ ಒದ್ದಾಟದಿಂದ ಹಾವಿನ ಶ್ವಾಸಕೋಶಕ್ಕೆ, ಬಲೆ ಸಿಲುಕಿ ಉಸಿರಾಟ ನಿಂತು ಕೊನೆಗೆ ನಿಸ್ತೇಜವಾಗಿ ಬಿದ್ದುಕೊಂಡಿತ್ತು.

ಇದನ್ನ ಭಯಭೀತರಾಗಿ ನೋಡುತ್ತಿದ್ದ ಮನೆಮಂದಿ ಸ್ಥಳೀಯ ಉರಗ ತಜ್ನ ಗುರುರಾಜ್ ಸನಿಲ್‌ಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಉರಗ ತಜ್ನರು ಹಾವು ಸತ್ತು ಹೋಯಿತ್ತೆಂದು ಭಾವಿಸಿ, ಬಲೆಯನ್ನ ತುಂಡು ಮಾಡಿ ನಾಗರಹಾವನ್ನ ಹೊರ ತೆಗೆದಿದ್ದಾರೆ.

ಕೂಡಲೇ ಉರಗ ತಜ್ನ ಅದರ ಹೃದಯದ ಭಾಗವನ್ನು ಕೈಯಲ್ಲಿ ಹಿಡಿದು ನೋಡಿದಾಗ ಪುಟ್ಟ ಹೃದಯ ಬಡಿದಾಡಲು ಶುರು ಮಾಡಲಾರಂಭಿಸಿತು. ಮತ್ತಷ್ಟು ನೀರನ್ನ ಅದರ ಮೈಮೇಲೆ ಹಾಕಿ ಕುಡಿಸಿದಾಗ ಹಾವು ಮತ್ತೆ ಮರುಜೀವ ಪಡಕೊಂಡು ಬುಸುಗುಟ್ಟುತ್ತಾ ಕುಡಿಯಲು ಕೊಟ್ಟ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನೇ ಕಚ್ಚಿದೆ. ಮರು ಜೀವ ಪಡೆದ ನಾಗರಹಾವನ್ನ ಉರಗ ತಜ್ನರು ಹತ್ತಿರದ ಅರಣ್ಯಕ್ಕೆ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ.

Related posts

Leave a Reply