Header Ads
Breaking News

ಸದೃಢ ಕರ್ನಾಟಕದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ : ಶಿವಮೊಗ್ಗದ ಸಮಾನವ್ಯ ಟ್ರಸ್ಟ್ ವತಿಯಿಂದ ಬೀದಿನಾಟಕ ಪ್ರದರ್ಶನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಅರಿವು ಮೂಡಿಸುವ ಸದೃಢ ಕರ್ನಾಟಕದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮವನ್ನು ಸಮಾನವ್ಯ ಟ್ರಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಉಡುಪಿಯ ಸಿಟಿ ಬಸ್ಟ್ಯಾಂಡ್‌ನಲ್ಲಿ ನಡೆಯಿತು.

ಪೋಷಣ್ ಆಭಿಯಾನ, ಬಾಲ್ಯವಿವಾಹ, ಮಾತೃವಂದನ, ಬೇಟಿ ಬಾಚವೋ ಬೇಟಿ ಪಡವೋ ಬಗ್ಗೆ ಬೀದಿನಾಟಕವನ್ನು ವೀಣಾ ವಿವೇಕಾನಂದ ಶಿಶುಅಭಿವೃದ್ದಿ ಯೋಜನಾಧಿಕಾರಿ ಉಡುಪಿ ರವರು ತಮಟೆ ಬಾರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಸೂಪರ್ವೈಸರ್ ಆಶಾಲತಾ, ಕಾನೂನು ಪರಿವೀಕ್ಷಣಾಧಿಕಾರಿ ಮಕ್ಕಳ ರಕ್ಷಣಾ ಘಟಕದ ಪ್ರಭಾಕರ ಆಚಾರ್, ಉಡುಪಿ ನಗರ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು. ಸಮನ್ವಯ ಕಲಾವಿದರಾದ ಲೋಕೇಶ್ ಭಕ್ತಿನಕಟ್ಟೆ, ಹನುಮಂತಪ್ಪ. ಆಶಾ, ರಾಮು, ಜ್ಯೋತಿ, ಅಶೋಕ್ ಕುಮಾರ್ ಬೀದಿ ನಾಟಕ ಪ್ರದರ್ಶಿಸಿದರು.

Related posts

Leave a Reply

Your email address will not be published. Required fields are marked *