Header Ads
Breaking News

ಸದ್ದು ಮಾಡುತ್ತಿದೆ ತೂತುವಡಿ ಸಾಂಗ್…

ಯೋಧ ಕ್ರಿಯೆಷನ್ ಅಡಿಯಲ್ಲಿ ನಿರ್ಮಾಣವಾದ ಲೈಫ್ ತೂತುವಡಿ ಆಲ್ಬಮ್ ಸಾಂಗ್ ಬಿಡುಗಡೆಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಓ ಮೈ ಗಾಡು ಲೈಫ್ ಎಷ್ಟೊಂದು ರಿಸ್ಕಿ ಎಂದು ಆರಂಭವಾಗುವ ಈ ಹಾಡಿನ ಸಾಹಿತ್ಯ ನವೀನ್ ಕಾಯರ್ತಡ್ಕ ಬರೆದು, ಸ್ವತಃ ತಾವೇ ಹಾಡಿದ್ದಾರೆ. ಸಂಗೀತವನ್ನು ಕಲಿಯದೆ ಇದ್ದರೂ, ಹಾಡು ಮಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ಹಾಡಿನ ರೆಕಾರ್ಡಿಂಗ್ ಸಮಯದ ಮೇಕಿಂಗ್ ದೃಶ್ಯಗಳನ್ನು ತೋರಿಸಲಾಗಿದೆ. ರವಿನಂದನ್ ಜೈನ್ ಎಂಬವರು ಈ ಹಾಡಿಗೆ ಸಂಗೀತವನ್ನು ನೀಡಿದ್ದಾರೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ, ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಲೆಂದು ಬೆಂಗಳೂರಿನತ್ತ ಪಯನ ಮಾಡಿದ ಇವರಿಗೆ ಯಾವ ಅವಕಾಶಗಳು ಸಿಗಲೇ ಇಲ್ಲ. ಕನ್ನಡದ ರಿಯಾಲಿಟಿ ಶೋ,ಗಳಿಗೆ ಆಡಿಷನ್ ಕೊಟ್ರು ಅಲ್ಲಿಯೂ ಅವಕಾಶಗಳು ಸಿಗಲಿಲ್ಲ. ನಂತರ ಹೊಟ್ಟೆಪಾಡಿಗಾಗಿ ಖಾಸಗಿ ಕಪನಿಯನ್ನು ಸೇರಿಕೊಂಡು, ತನ್ನನ್ನು ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಬಿಡುವಿನ ಸಮಯದಲ್ಲಿ ಸಾಹಿತ್ಯವನ್ನು ಬರೆದು ಇದೀಗ ಹಾಡು ಬಿಡುಗಡೆ ಕೂಡ ಆಗಿದೆ. ಯುಟ್ಯೂಬ್,ಗೆ ಹೋಗಿ ಲೈಫ್ ತೂತುವಡಿ ಕನ್ನಡ ಆಲ್ಬಮ್ ಹಾಡು ಎಂದು ಹುಡುಕಿದರೆ ನವೀನ್ ಅವರ ಹಾಡು ಕಾಣಸಿಗುತ್ತದೆ.

ವಿಶೇಷವೆಂದರೆ ಈ ಹಾಡನ್ನು ಪ್ರಮೋಷನ್ ಮಾಡಿರೋದು ನಮ್ಮ ರಿಯಲ್ ಹೀರೋಗಳು. ಇಂಡಿಯನ್ ಆರ್ಮಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಫಿಲಿಪ್ ಥೋಮಸ್ ಹಾಗೂ ರಂಜಿತ್ ಎಂಬುವವರು. ಸಧ್ಯಕ್ಕೆ ಇನ್ನೊಂದು ಹಾಡಿನ ರೆಕಾರ್ಡಿಂಗ್ ನಡೆಯುತ್ತಿದ್ದು ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಶ್ವೇತಾ. ಮುಂಡ್ರುಪ್ಪಾಡಿ

Related posts

Leave a Reply

Your email address will not be published. Required fields are marked *