Header Ads
Header Ads
Header Ads
Breaking News

ಸದ್ಭಾವನ ಮಿಷನ್ ಅಂಗವಾಗಿ ಉಪವಾಸ ಸತ್ಯಾಗ್ರಹ ನ.16 ರಂದು ಸುಳ್ಯದಲ್ಲಿ 2 ನೇ ಹಂತದ ಹೋರಾಟ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಹೇಳಿಕೆ

 
ಸದ್ಬಾವನಾ ಮಿಷನ್ ಅಂಗವಾಗಿ 2 ನೇ ಹಂತದ ಉಪವಾಸ ಸತ್ಯಾಗ್ರಹ ಸಹಿಷ್ಟುತಾ ದಿನವಾದ ನ.16 ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್ ತಿಳಿಸಿದ್ದಾರೆ.

ಅವರು ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಡೀ ದೇಶಕ್ಕೆ ಮಾದರಿಯಾಗಬಹುದಾದ ಮತೀಯ ಸಾಮರಸ್ಯದ ಚರಿತ್ರೆಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತ್ಯತೀತತಗೆ ಸಂವಿಧಾನದ ತತ್ವಗಳಿಗೆ ಧಕ್ಕೆ ತರುವಂತಹ ಘಟನೆಗಳು ನಮ್ಮ ಕಣ್ಣೆದುರೆ ನಡೆದಿದೆ.ಅದಕ್ಕಾಗಿ ಆತ್ಮ ಪರಿಶುದ್ದತೆಗೆ ಪ್ರೇರಣೆ ನೀಡುವ ಆಧ್ಯಾತ್ಮಿಕ ಮಾರ್ಗವಾದ ಸದ್ಬಾವನಾ ಉಪವಾಸ ಸತ್ಯಾಗ್ರಹ ಸಂಘಟಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಪ್ರಧಾನ ಕಾರ್ಯದರ್ಶಿ ಶ್ರೀ ಹರಿ ಕುಕ್ಕುಡೇಲು,,ನಂದರಾಜ್ ಸಂಕೇಶ ಇತರರು ಉಪಸ್ಥಿತರಿದ್ದರು.

ವರದಿ: ತೇಜೇಶ್ವರ ಸುಳ್ಯ

Related posts

Leave a Reply