Header Ads
Header Ads
Header Ads
Breaking News

ಸಬ್ಲಾಡಿಯಲ್ಲಿ ಮರಳು ದಕ್ಕೆ ನಿರ್ಮಾಣಕ್ಕೆ ಆಕ್ರೋಶ ಸ್ಥಳೀಯರ ಆಕ್ರೋಶ , ಸ್ಥಳಕ್ಕೆ ಆಗಮಿಸಿದ ಪೊಲೀಸರು

 

ಕುಂದಾಪುರ ತಾಲೂಕಿನ ತಲ್ಲೂರು ಸಮೀಪದ ಸಬ್ಲಾಡಿಯಲ್ಲಿ ಮರಳು ದಕ್ಕೆ ನಿರ್ಮಾಣಕ್ಕೆ ಹೊರಟ ಹಿನ್ನೆಲೆ ಗ್ರಾಮಸ್ಥರು ಧಕ್ಕೆ ಮಾಲಿಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಸಿದರು. ಈ ಪ್ರದೇಶದಲ್ಲಿ ಮರಳು ದಕ್ಕೆ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಸಾರ್ವಜನಿಕರು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ರಸ್ತೆಯಲ್ಲಿ ಮರಳುಗಾರಿಕೆ ಧಕ್ಕೆ ನಿರ್ಮಾಣಕ್ಕೆ ಸಿದ್ದತೆ ನಡೆಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಪರವಾನಿಗೆದಾರರು ಸ್ಥಳದಲ್ಲಿ ನದಿ ಮೂಲಕ ದೋಣಿಯಲ್ಲಿ ಮರಳನ್ನ ತಂದು ದಕ್ಕೆಯನ್ನ ದುರಸ್ತಿ ಮಾಡಲು ಹೊರಟಿದ್ದು. ಇದನ್ನ ಕಂಡ ಸ್ಥಳೀಯರು ಗ್ರಾಮಪಂಚಾಯತ್ ಪೊಲೀಸ್ ಇಲಾಖೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಈ ಸ್ಥಳದಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ. ಇದರಿಂದಾಗಿ ಕೆಲಹೊತ್ತು ಮತ್ತೆ ಮಾತಿನ ಚಕಮಕಿ ನಡೆಯಿತು.

Related posts

Leave a Reply