Header Ads
Breaking News

ಸಮಯ ಪಾಲನೆ ಸಾಧನೆಗೆ ತಳಹದಿ : ಎ.ವಿ ಚಿತ್ತರಂಜನ್ ದಾಸ್

ಉಜಿರೆ: “ಪತ್ರಿಕೋದ್ಯಮ ಇಂದು ಬಹಳಷ್ಟು ಪ್ರಗತಿಯನ್ನು ಹೊಂದಿರುವ ಕ್ಷೇತ್ರ. ನಾವು ಇದನ್ನು ಎಷ್ಟು ರಂಗಾಗಿ ಸೃಷ್ಟಿಸುತ್ತೇವೋ ಅಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತದೆ” ಎಂದು ಆಕಾಶವಾಣಿ ವಾರ್ತಾ ವಾಚಕರಾಗಿದ್ದ ಎ.ವಿ ಚಿತ್ತರಂಜನ್ ದಾಸ್ ನುಡಿದರು.ಉಜಿರೆಯ ಶ್ರೀ ಧ.ಮಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ‘ರೇಡಿಯೋ ಜಗತ್ತು ಮತ್ತು ಕ್ರಿಯಾಶೀಲ ಬರಹ’ ವಿಶೇಷ ಉಪನ್ಯಾಸ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು “ಪತ್ರಿಕೋದ್ಯಮ ರಂಗದಲ್ಲಿ ಈಗ ಅವಕಾಶಗಳು ವಿಪುಲವಾಗಿವೆ. ಆದರೆ ಅರ್ಹ ಅಭ್ಯರ್ಥಿಗಳ ಕೊರತೆಯಿದೆ. ಈ ಜೀವನದಲ್ಲಿ ಸಾಧನೆ ಮಾಡಲು ಸಮಯ ಪಾಲನೆ ಅತೀ ಅಗತ್ಯ.ಕಠಿಣ ಪರಿಶ್ರಮದಿಂದ ಗೆಲುವು ಸಾಧ್ಯ. ಆಸಕ್ತಿ ಹಾಗೂ ನಿರ್ಧಾರಗಳು ನಮ್ಮ ದಿಕ್ಕನ್ನು ಬದಲಿಸುತ್ತವೆ. ಕನಸನ್ನು ಸಾಕಾರಗೊಳಿಸುವಲ್ಲಿ ನಮ್ಮ ಪ್ರಯತ್ನ ಮಹತ್ತರವಾದುದು” ಎಂದರು.

ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗಡೆ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಎರಡು ವಿಶೇಷ ರೀತಿಯ ‘ಚಿಗುರು’ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ವಿಕ್ರಂ ಹೆಗಡೆ ಅತಿಥಿ ಪರಿಚಯಿಸಿದರು. ಶಶಾಂಕ ವಂದಿಸಿ, ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

 

Related posts

Leave a Reply

Your email address will not be published. Required fields are marked *