Header Ads
Header Ads
Header Ads
Breaking News

‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದಿಂದ ಬಂಬ್ರಾಣ ಉಸ್ತಾದರಿಗೆ ಸನ್ಮಾನ

ಪುತ್ತೂರು : ದೇಶದ ಅತ್ಯುನ್ನತ ಉಲಮಾ ಸಂಘಟನೆಯಾದ “ಸಮಸ್ತ” ದ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದ ರಾಜ್ಯದ ಪ್ರಮುಖ ಧಾರ್ಮಿಕ ವಿದ್ವಾಂಸ ,ವಾಗ್ಮಿ ಬಿ.ಕೆ.ಅಬ್ದುಲ್‌ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರನ್ನು ಕರ್ನಾಟಕ ರಾಜ್ಯ “ಸಮಸ್ತ” ಹನೀಫಿ ಉಲಮಾ ಒಕ್ಕೂಟದ ವತಿಯಿಂದ ಕೂರ್ನಡ್ಕದಲ್ಲಿ ನಡೆದ ಧಾರ್ಮಿಕ ಪ್ರಭಾಷಣದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಮಸ್ತ ಹನೀಫಿ ಉಲಮಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ , ಜೊತೆ ಕಾರ್ಯದರ್ಶಿ ಅಬ್ದುಲ್‌ ಗಪೂರ್ ಹನೀಫಿ ವಿಟ್ಲ, ಎಸ್ಕೆಎಸ್ಸೆಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಅಬ್ದುಲ್‌ ಮಜೀದ್ ದಾರಿಮಿ ಕುಂತೂರು, ಸತ್ತಾರ್ ಕೌಸರಿ, ಉನೈಸ್ ಪೈಝಿ ಕೂರ್ನಡ್ಕ, ಕೆಐಸಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷನ್, ಕೂರ್ನಡ್ಕ ಜಮಾಅತ್ ಅಧ್ಯಕ್ಷ ಖಾಸಿಂ ಹಾಜಿ, ಅಬ್ದುಲ್‌ ಹಮೀದ್ ಹನೀಫಿ ದರ್ಬೆ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *