Header Ads
Header Ads
Header Ads
Breaking News

ಸಮಸ್ಯೆಯ ಸುಳಿಯಲ್ಲಿ ಮುರ್ಡೇಶ್ವರ ಪ್ರವಾಸಿ ತಾಣ ಸಂಪೂರ್ಣ ದುಸ್ಥಿತಿಯತ್ತ ಸಾಗಿದ ಬಸ್ ನಿಲ್ದಾಣ ಕೊಳಚೆಯಿಂದ ಗಬ್ಬೆದ್ದು ನಾರುತ್ತಿರುವ ತಂಗುದಾಣ

ಭಟ್ಕಳದ ಮುರ್ಡೇಶ್ವರ ಒಂದು ಪ್ರಸಿದ್ದವಾದ ಪ್ರವಾಸಿ ತಾಣ ಎನ್ನುದರಲ್ಲಿ ಎರಡು ಮಾತಿಲ್ಲಾ ಹಾಗೇ ಇದೇ ಪ್ರಸಿದ್ದಸ್ಥಳವಾದ ಮುರ್ಡೇಶ್ವರ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಿರುವುದು ಸುಳ್ಳಲ್ಲ. ಈ ಹಿಂದೆ ಕಸದ ಸಮಸ್ಯೆಗಳ ಬಗ್ಗೆ ನಮ್ಮ ವಾಹಿನಿಯಲ್ಲಿ ವಿಸ್ತೃತ ವರದಿ ಮಾಡಿರುವುದು ನೀವು ನೋಡಿರಬಹುದು ಹಾಗೇ ಈಗ ವಿಪರ್ಯಾಸ ಎನ್ನುವಂತೆ ಪ್ರಸಿದ್ದವಾದ ಮುರ್ಡೆಶ್ವರದ ಬಸ್ ನಿಲ್ದಾಣದ ಚಿತ್ರಣ ಸಂಪೂರ್ಣ ದುಸ್ಥಿತಿಯತ್ತ ಸಾಗಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.

ಮುರ್ಡೇಶ್ವರಕ್ಕೆ ಪ್ರವಾಸಿಗರು ದೇಶ ವಿದೇಶಗಳಿದ್ದ ಬರುತ್ತಿದ್ದು ಇಂಥ ಪ್ರಸಿದ್ದ ಪ್ರವಾಸಿ ತಾಣದಲ್ಲಿ ಬಸ್ ನಿಲ್ದಾಣದಲ್ಲಿ ಸಮಸ್ಯೆ ತಲೆಯೆತ್ತಿದ್ದು, ಈ ಬಗ್ಗೆ ಯಾವ ಜನಪ್ರತಿನಿಧಿಗಳು ಕೂಡಾ ತಲೆಕೆಡಿಸಿಕೊಳ್ಳದಿರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ. ಈಗ ಮುರ್ಡೇಶ್ವರದ ಬಸ್ ನಿಲ್ದಾಣವು ಯಾವ ರೀತಿಯಲ್ಲಿ ಕೊಳಚೆಗಳಿಂದ ಗಬ್ಬೆದ್ದು ನಾರುತ್ತಿದೆ ಎಂದರೆ ಬಸ್ ನಿಲ್ದಾಣಕ್ಕೆ ಹೋದರೆ ಸಾರ್ವಜನಿಕ ಶೌಚಾಲಯಕ್ಕೆ ಹೋದ ಅನುಭವವಾಗುತ್ತದೆ. ಕಳೆದ ವರ್ಷ ಬಸ್ ನಿಲ್ದಾಣದ ಸ್ಥಿತಿ ಹೀಗೆಯೆ ತುಂಬಾ ಚಿಂತಾಜನಕ ಸ್ಥಿತಿಯಲ್ಲಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಕೆ.ಎಸ.ಆರ್.ಟಿ.ಸಿ ಇಲಾಖೆಯಿಂದ ಮುರ್ಡೇಶ್ವರ ಬಸ್ ನಿಲ್ದಾಣವನ್ನು ಕಾಟಾಚಾರಕ್ಕೆ ಎನ್ನುವಂತೆ ಅಭಿವೃದ್ದಿ ಮಾಡಲಾಗಿತ್ತು. ಈ ಅಭಿವೃದ್ದಿ ಕಾರ್ಯ ಯಾವ ರೀತಿಯಲ್ಲಿ ಅವೈಜ್ಞಾನಿಕತೆಯಿಂದ ಕೂಡಿತ್ತು ಎಂದರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಲಕ್ಷಗಟ್ಟಲೇ ಖರ್ಚುಮಾಡಿ ಹಾಕಿದ್ದ ಇಂಟರ್ ಲಾಕ್ ಕೆಲವೇ ದಿನಗಳಲ್ಲಿ ಸಂಪೂರ್ಣ ಕಿತ್ತು ಹೋಗಿದ್ದು ಇಲ್ಲಿ ಯಾವ ರೀತಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ ಎಂದು ನಮ್ಮ ಕಣ್ಣಿಗೆರಾಚುತ್ತದೆ.

ಈ ಬಸ್ ನಿಲ್ದಾಣದ ಮತ್ತೊಂದು ತೀರಾ ಅಸಯ್ಯ ಹುಟ್ಟಿಸುವ ಸ್ಥಿತಿ ಎಂದರೆ ಶುದ್ಧಿಕರಿಸಿದ ಕುಡಿಯುವ ನೀರಿನ ಅವ್ಯವಸ್ಥೆ. ಇದು ನಮ್ಮ ಪ್ರವಾಸೋದ್ಯಮ ಇಲಾಖೆಯ ತೀರಾ ನಾಚಿಕೆ ಪಡುವ ಸಂಗತಿಯಾಗಿದೆ. ಅಲ್ಲಿ ಬಂದವರು ನೀರನ್ನು ಕುಡಿದು ಬದುಕಬೇಕೋ? ಅಥವಾ ಸಾಯಬೇಕೋ? ಎನ್ನುವುದು ತಿಳಿಯದ್ದಾಗಿದೆ. ಈ ಬಗ್ಗೆ ಜನಪ್ರತಿನಿದಿಗಳು ಅಥವಾ ಅಧಿಕಾರಿಗಳಲ್ಲಿ ಕೇಳಿದರೆ ಸಿಗುವ ಉತ್ತರ ಮಾತ್ರ ಕೇವಲ ಭರವಸೆಯೇ ಹೊರತು ಅಭಿವೃದ್ಧಿ ಕಾರ್ಯವಲ್ಲ. ಈ ಬಗ್ಗೆ ಇನ್ನಾದರು ಇದಕ್ಕೆ ಸಂಬಂದಿಸಿದ ಇಲಾಖೆಯಾಗಲಿ ಜನಪ್ರತಿನಿದಿಗಳಾಗಲಿ ಎಚ್ಚೆತ್ತುಕೊಂಡು ಪ್ರಸಿದ್ದ ಪ್ರವಾಸಿ ಸ್ಥಳವಾದ ಮುರ್ಡೆಶ್ವರ ಬಸ್ ನಿಲ್ದಾಣದ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply