Header Ads
Breaking News

ಸಮಾಜದಲ್ಲಿ ಪತ್ರಕರ್ತರ ಪಾತ್ರ ಮಹತ್ತರ : ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜೀತೇಂದ್ರ ಪುಟ್ರಾಡೋ ಅಭಿಪ್ರಾಯ

ಕೊರೊನಾ ವೈರಸ್ ಭೀತಿಯ ಈ ದಿನಗಳಲ್ಲಿ ಬಹಳಷ್ಟು ಕೊರೊನಾ ವಾರಿಯರ್ ಗಳು ಕಾರ್ಯಚರಿಸುತ್ತಿದ್ದು, ಅವರಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂಬುದಾಗಿ ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜೀತೇಂದ್ರ ಪುಟ್ರಾಡೋ ಹೇಳಿದ್ದಾರೆ.

ಅವರು ಪಲಿಮಾರು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕೊರೊನಾ ಸಂತ್ರಸ್ಥರಾದ ಪಲಿಮಾರು ಅಟೋ ಚಾಲಕರು ಹಾಗೂ ಕಾರು ಚಾಲಕರಿಗೆ ಯುಪಿಸಿಎಲ್ ಕಂಪನಿ ಕೊಡ ಮಾಡಿದ ಕಿಟ್ಟನ್ನು ವಿತರಿಸಿ ಮಾತನಾಡಿದರು. ಇದೇ ಸಂದರ್ಭ ಕಾಪು ತಾಲೂಕು ಪತ್ರಕರ್ತ ಸಂಘದ ಸದಸ್ಯರನ್ನು ಕೊರೊನಾ ವಾರಿಯರ್ಸ್ ಎಂಬುದಾಗಿ ಗುರುತಿಸಿ ಸನ್ಮಾನಿಸಿ ಗೌರವಿಸಲಾಯುತು.
ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ, ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್, ಗ್ರಾ.ಪಂ. ಉಪಾದ್ಯಕ್ಷೆ ಸುಮಂಗಳ ದೇವಾಡಿಗ, ಸದಸ್ಯೆ ಗಾಯತ್ರಿ ಪ್ರಭು ಪಿಡಿಒ ಸತೀಶ್ ಕುಮಾರ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *