Header Ads
Header Ads
Breaking News

ಸಮಾಜದಲ್ಲಿ ರಿಕ್ಷಾ ಚಾಲಕರಿಗೆ ವಿಶೇಷ ಗೌರವ ನೀಡಬೇಕು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿಕೆ

ಸಮಾಜದಲ್ಲಿ ರಿಕ್ಷಾ ಚಾಲಕರಿಗೆ ವಿಶೇಷ ಗೌರವ ನೀಡಬೇಕು, ಇವರು ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಅವರು ಪಕ್ಷಿಕೆರೆಯ ಚರ್ಚ್ ಸ್ಟಾಪ್ ರಿಕ್ಷಾ ಪಾರ್ಕ್‌ನಲ್ಲಿ 2 ಲಕ್ಷರೂ ಅನುದಾನದಲ್ಲಿ ರಿಕ್ಷಾಪಾರ್ಕ್‌ಗೆ ಮೇಲ್ಛಾವಣಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ , ಪ್ರತಿ ಹೋಬಳಿಗೆ ಒಂದು ರಿಕ್ಷಾ ಭವನ ಮತ್ತು ರಿಕ್ಷಾ ಚಾಲಕರಿಗೆ ಸ್ವಸಹಾಯ ಸಂಘದ ರಚನೆಗೆ ಒತ್ತಾಯಿಸಲಾಗುದು, ಜಿಲ್ಲೆಯಲ್ಲಿ ಮಹಿಳೆಯರಿಗೋಸ್ಕರ ಅನೇಕ ವಿಶೇಷ ವೈದ್ಯಕೀಯ ಶಿಬಿರ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 6 ಕೋಟಿಯಷ್ಟು ವೈದ್ಯಾಕೀಯ ಚಿಕಿತ್ಸೆಗೆ ನೀಡಿದ್ದೇನೆ ಮೂಲ್ಕಿ – ಮೂಡಬಿದ್ರೆ ಕ್ಷೇತ್ರದಲ್ಲಿ ಈಗಾಗಲೇ 15 ಕ್ಕೂ ಮಿಕ್ಕಿ ಪಾರ್ಕ್ ಮೇಲ್ಚಾವಣಿ ನಿರ್ಮಿಸಲಾಗಿದೆ ಎಂದರು.

ಅತ್ತೂರು ಕೋರ್‍ದಬ್ಬು ದೈವಸ್ಥಾನದ ಗೌರವಾಧ್ಯಕ್ಢ ಶ್ಯಾಮರಾಯ ಶೆಟ್ಟಿ ಗೋಳಿದಡಿ ಮೆಲ್ಚಾವಣಿಯನ್ನು ಉದ್ಘಟಿಸಿದರು. ಕಾರ್ಯಕ್ರಮದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು, ಕಾಂಗ್ರೆಸ್ ಮುಖಂಡ ಗುರುರಾಜ ಎಸ್ ಪೂಜಾರಿ, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಿರ್ಚ್‌ಡ್ ಡಿಸೋಜ, ಪಕ್ಷಿಕೆರೆ ಅತ್ತೂರು ಕಾಪಿಕಾಡು ಕೋರ್‍ದಬ್ಬು ದೈವಸ್ಥಾನದ ಶೀನ ಸ್ವಾಮಿ, ಮತ್ತಿತರರು ಇದ್ದರು.