Header Ads
Header Ads
Breaking News

ಸಮಾಜದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ, ಶಿಕ್ಷಣದಿಂದ ಜಾಗೃತಿ ಜಿ. ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು


ಸಮಾಜದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನಮಾನವಿದೆ, ಶಿಕ್ಷಣದಿಂದ ಹೆಣ್ಣು ಜಾಗೃತಿಯಾಗುವಳು ಎಂದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಕಿನ್ನಿಗೋಳಿಯಲ್ಲಿ Pತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಮಂಗಳೂರು ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಶಿವಮೊಗ್ಗ, ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಗ್ರಾಮ ಪಂಚಾಯತ್ ಮೆನ್ನಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಮಗು ರಕ್ಷಿಸಿ ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ ಮತ್ತು ಯೋಗದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಹೆಣ್ಣು ಬದಲಾಗುತ್ತಾಳೆ ಎಂಬುದಕ್ಕೆ ಇಂದು ಅನೇಕ ಉದಾಹರಣೆಗಳಿವೆ ಎಂದರು.
ಅನಂತರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಹೆಣ್ಣು ಗಂಡು ಬೇಧಬಾವವನ್ನು ಹೋಗಲಾಡಿಸುವುದು ನಮ್ಮೇಲ್ಲರ ಕರ್ತವ್ಯ, ಸರಕಾರ ಹೆಣ್ಣು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಪತಂಜಲಿ ಕೇಂದ್ರದ ಯೋಗ ಗುರು ವಿವೇಕ ಯೋಗದ ಬಗ್ಗೆ ಮಾಹಿತಿ ನೀಡಿದರು, ಇಲಾಖೆಯ ವತಿಯಿಂದ ಮಹಿಳೆಯರಿಗೆ ರಸಪ್ರಶ್ನೆ ಸ್ಪರ್ದೆ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯರಾದ ಶರತ್ ಕುಬೆವೂರು, ದಿವಾಕರ ಕರ್ಕೇರಾ, ಶುಭಲತಾ ಶೆಟ್ಟಿ, ಎಸಿಡಿಪಿ ಭಾರತಿ, ಮೆನ್ನಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಅಂಗನವಾಡಿ ಮೆಲ್ವಿಚಾರಕಿ ಅಶ್ವಿನಿ, ಮಾಧುರಿ ಮತ್ತಿತರರು ಇದ್ದರು.

Related posts

Leave a Reply