Header Ads
Header Ads
Breaking News

ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳಿಗೆ ಶಾಸಕರಿಂದ ಅಡ್ಡಿ: ಸುಳ್ಯ ಬ್ಲಾಕ್ ಕಾಂಗ್ರೆಸ್ ಆರೋಪ

ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುದಕ್ಕೆ ಸುಳ್ಯ ಶಾಸಕ ಎಸ್. ಅಂಗಾರ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಕಳೆದ ವರ್ಷ ಸುಳ್ಯಕ್ಕೆ ಬಂದಿದ್ದಾಗ ನಮ್ಮ ಬೇಡಿಕೆಯ ಮೆರೆಗೆ ಮೂರು ಕಡೆಗಳಿಗೆ ತಲಾ ೨೫ ಲಕ್ಷದಂತೆ ಅನುದಾನ ಘೋಷಿಸಿದ್ದರು. ಅದರಂತೆ ಸಂಪಾಜೆಯ ಕಿಲಾರುಮೂಲೆ, ಕೋಲ್ಚಾರಿನ ಪೈಂಬೆಚ್ಚಾಲ್ ಮತ್ತು ಜಾಲ್ಸೂರಿನ ಮಾಪಲಡ್ಕದಲ್ಲಿ ಕಾಮಗಾರಿಯೂ ಕೆಆರ್‌ಐಡಿಎಲ್ ನವರಿಂದ ನಡೆದಿತ್ತು. ಆದರೆ ಶಾಸಕರು ಇದು ನಾನು ತರಿಸಿದ ಅನುದಾನ ಜಿಲ್ಲಾ ಪಂಚಾಯತ್‌ನಿಂದ ಕಾಮಗಾರಿ ನಡೆಯಬೇಕು ಎಂದು ಇಲಾಖೆಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ನಾವು ಉಸ್ತುವಾರಿ ಸಚಿವರ ಮುಖಂತರ ಮುಂದುವರಿಯುವಂತೆ ಮಾಡಿದ್ದೇವೆ ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಮತನಾಡಿ ಇತ್ತಿಚೆಗೆ ಅಜ್ಜಾವರ ರಸ್ತೆ ಅನುದಾನ ಕುರಿತಂತೆ ಜಯಪ್ರಕಾಶ್ ರೈ ನೀಡಿದ ಹೇಳಿಕೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನವೀನ್ ಕುಮಾರ್ ಮೇನಾಲ ಅವರು ನೀಡಿದ ಪ್ರತಿ ಹೇಳಿದ ಹೇಳಿಕೆಗೆ ಪತ್ರಕರ್ತರು ಜಯಪ್ರಕಾಶ್ ರೈ ಅವರ ಗಮನ ಸೆಳೆದಾಗ ಅಜ್ಜಾವರ ರಸ್ತೆ ಅನುದಾನವನ್ನು ಪ್ರಶ್ನಿಸಲು ನವೀನ್ ರೈ ಮೇನಾಲ ಯಾರು ಎಂದು ನಾನು ಹೇಳಿಲ್ಲ ಆದರೆ ಕಾಮಗಾರಿಗೆ ತಡೆ ಆದರೆ ಅದಕ್ಕೆ ದಾಖಲೆ ಇರುತ್ತದೆ. ಅದನ್ನು ಹಾಜರು ಪಡಿಸುದನ್ನು ಬಿಟ್ಟು ಸುಮ್ಮನೆ ಧ್ವನಿ ಮುದ್ರಿಕೆಗಳನ್ನು ಪ್ರಚಾರ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದೆ. ಇದಕ್ಕೆ ಸಂಬಂದ ಪಟ್ಟ ಕೆಲವು ದಾಖಲೆಗಳನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಪರಿಶೀಲಿಸಿದಾಗ ಕಾಮಗಾರಿ ತಡೆ ಒಡ್ಡಿದಾಗಲಿ , ಕಾಮಗಾರಿ ಅನುದಾನವನ್ನು ಬೇರೆಡೆಗೆ ವರ್ಗಹಿಸಿದ್ದಾಗಲಿ ಕಂಡು ಬರುತ್ತಿಲ್ಲ. ಅಲ್ಲದೇ ಈ ಕಾಮಗಾರಿಗೆ ಟೆಂಡರ್ ಪ್ರಕ್ರೀಯೆ ಕೂಡ ನಡೆದಿದ್ದು. ಮೂರು ಮಂದಿ ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಉಸ್ತುವಾರಿ ಸಚಿವರು ಹೇಳಿದಂತೆ ಕೇಂದ್ರದಿಂದ ಸಿಆರ್‌ಎಫ್ ಫಂಡ್‌ನಲ್ಲಿ 15೦೦ ಕೋಟಿ ಬರಬೇಕಾಗಿತ್ತು. ಅದರಲ್ಲಿ ಕೇವಲ 500 ಕೋಟಿ ಮಾತ್ರ ಬಂದಿದೆ. ಕೇಂದ್ರದಿಂದ ಅನುದಾನ ಬಾರದ ಕಾರಣ ಇಲ್ಲಿ ಯತಸ್ಥಿತಿ ಆದೇಶ ಮಾತ್ರ ನೀಡಲಾಗಿದೆ. ಮೊದಲು ಈ ಕಾಮಗಾರಿ ಒಂದನೇ ಹಂತದಲ್ಲಿ ಸೇರಿತ್ತು. ಆದರೆ ಶಾಸಕರು ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದರ ಫಲವಾಗಿ ಎರಡನೇ ಹಂತಕ್ಕೆ ಸೇರುವಂತಾಯಿತು. ಒಂದನೇ ಹಂತದಲ್ಲಿಯೇ ಇದ್ದಿದ್ದರೆ ಯಾವಾಗಲೂ ಕಾಮಗಾರಿ ಆರಂಭ ವಾಗುತ್ತಿತ್ತು ಎಂದರಲ್ಲದೇ ಇನ್ನು ಕೂಡ ಕೇಂದ್ರದ ಅನುದಾನಕ್ಕೆ ಕಾಯಬೇಕೆ ಅಥವಾ ಗ್ರಾಮ ಪಂಚಾಯತ್‌ನಿಂದ ಹಿಡಿದು ಸಂಸದವರೆಗೆ ಇರುವ ಅವರ ಜನಪ್ರತಿನಿಧಿಗಳು ಕನಿಷ್ಠ ಪ್ಯಾಚ್ ವರ್ಕ್ ಆದರೂ ಮಾಡಬೇಕೆ ಎಂದು ನಿರ್ಧರಿಸಬೇಕು. ಆ ರಸ್ತೆ ಯಾವ ಒತ್ತಡದಿಂದ ಬೇಗ ಹಾಳಾಗುತ್ತಿದೆ ಎಂದು ಎಲ್ಲರಿಗಿಂತ ಜಾಸ್ತಿ ನವೀನ್ ರೈ ಅವರಿಗೆ ಗೊತ್ತಿದೆ ಎಂದು ಕೆಣಕಿದರು. ನವೀನ್ ಮೇನಾಲರವರ ಟೀಕೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಮ್ಮಪ್ರಯತ್ನದ ಫಲವನ್ನು ಅವರಿಂದು ಉಣ್ಣುತ್ತಿದ್ದಾರೆ. ಪಕ್ಷವನ್ನು ಕಟ್ಟಿದ ಹಿರಿಯರೆಲ್ಲ ದೂರವಾಗಿದ್ದಾರೆ. ಎನ್.ಎ.ರಾಮಚಂದ್ರರಂತಹ ನಾಯಕರನ್ನು ದೂರ ಮಾಡಲಾಗುತ್ತಿದೆ. ನನಗೆ ನನ್ನದೆ ಆದ ಗೌರವ ಮತ್ತು ಸ್ವಾಭಿಮಾನ ಇದೆ. ಅದಕ್ಕೆ ಧಕ್ಕೆ ಬಂದ ಕಾರಣ ಆ ಪಕ್ಷ ಬಿಟ್ಟು ಹೊರಬಂದೆ. ಆದರೆ ನವೀನ್ ರೈ ಅವರಿಗೆ ಅಂತಹ ಸ್ವಾಭಿಮಾನ ಇಲ್ಲ. ಈಗಾಗಿ ಇನ್ಯಾರೋ ಅವರಿಗೆ ಗೈಡ್ ಮಾಡುತ್ತಾರೆ. ಜಯಪ್ರಕಾಶ್ ರೈಯವರನ್ನು ಬೈದು ಬಾ ಅಂದರೆ ಇಲ್ಲಿ ಬಂದು ಗಿಣಿ ಪಾಠ ಒಪ್ಪಿಸುತ್ತಾರೆ. ನವೀನ್ ರೈ ಅವರು ಕೂಡ ಸ್ವಾಭಿಮಾನ ಬೆಳೆಸಿಕೊಳ್ಳಲಿ ಮತ್ತು ಆತ್ಮಾವಿಮರ್ಶೆ ಮಾಡಿಕೊಳ್ಳಲಿ. ನಾನು ಬೇರೆ ವ್ಯಕ್ತಿಗತವಾದ ಟೀಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ಮಾ. 20ರಂದು ರಾಹುಲ್ ಗಾಂಧಿ ಮಂಗಳೂರಿಗೆ ಆಗಮಿಸಲಿದ್ದು ಅಂದು ಸುಳ್ಯ ಬ್ಲಾಕ್‌ನಿಂದ 10ಸಾವಿರ ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಭಾಗ