Header Ads
Breaking News

ಸಮಾಜ ಸೇವೆಯಲ್ಲಿ ಸಂಘಟನೆ ತೊಡಗಿಕೊಂಡಾಗ ಯಶಸ್ಸು ಸಾಧ್ಯ ದ.ಕ. ಜಿಲ್ಲಾ ಕ್ಯಾಟರಿಂಗ್ ಅಸೋಸಿಯೇಶನ್‌ನ ರಾಜೇಶ್ ಶೆಟ್ಟಿ ಹೇಳಿಕೆ

ಯಾವುದೇ ಒಂದು ಸಂಘಟನೆ ಸಮಾಜ ಸೇವೆ ಮೂಲಕ ಮುನ್ನಡೆದಾಗ ಆ ಸಂಘಟನೆ ಯಶಸ್ಸಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಒನರ್‍ಸ್ ಅಸೋಶಿಯೇಶನ್ ಮಂಗಳೂರು ಇದರ ರಾಜೇಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿ ಅಶ್ರಮದ ಮಕ್ಕಳಿಗೆ ಅಸೋಸಿಯೇಶನ್ ವತಿಯಿಂದ ಊಟ ನೀಡಿ ಮಾತನಾಡಿ, ಮಕ್ಕಳೆಂದರೆ ದೇವರಿಗೆ ಸಮಾನ, ಅವರ ಮನಸ್ಸು ಮುಗ್ದವಾಗಿರುತ್ತದೆ, ಮಾರ್ಚ್ 25 ರಂದು ಮಂಗಳೂರು ಪುರಭವನದಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಒನರ್‍ಸ್ ಅಸೋಶಿಯೇಶನ್ ಅಧಿಕೃತವಾಗಿ ಉದ್ಘಟನೆಗೊಳ್ಳಲಿದ್ದು ಆ ಪ್ರಯುಕ್ತ ದ.ಕ. ಜಿಲ್ಲೆಯ ಎಲ್ಲಾ ಅಶ್ರಮದ ಮಕ್ಕಳಿಗೆ ಊಟ ನೀಡುವ ಯೋಜನೆಯನ್ನು ಕೈಗೊಂಡಿದ್ದೇವೆ ಈಗಾಗಲೇ 18 ಅಶ್ರಮಗಳಿಗೆ ನಮ್ಮ ಸಂಸ್ಥೆಯಿಂದ ಊಟ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ಸಮಾಜಮುಖಿ ಕೆಲಸಗಳನ್ನು ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.ಈ ಸಂದರ್ಭ ಅಶ್ರಮದ ಸುಮಾರು ನೂರು ಮಕ್ಕಳಿಗೆ ಮಾಂಸಹಾರಿ ಮತ್ತು ಸಸ್ಯಹಾರಿ ಊಟವನ್ನು ನೀಡಲಾಯಿತು.ಈ ಸಂದರ್ಭ ಅಸೋಸಿಯೆಶನ್ ನ ಜೈಕೃಷ್ಣ ಕೋಟ್ಯಾನ್, ಪೂಜಾ ಪ್ರೆಂಡ್ಸ್ ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಿಥುನ್ ಸುವರ್ಣ, ನಯನ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *