Header Ads
Header Ads
Breaking News

ಸಮಾರಂಭ ಸಂತ ಅಲೋಶಿಯಸ್ ಗೋನ್ಸಾಗಾದಲ್ಲಿ ಶೈಕ್ಷಣಿಕ ಅಧಿವೇಶನ ಇನ್ವೆಸ್ಟಿಟ್ಯೂರ್ ಸಮಾರಂಭ

ಮಂಗಳೂರಿನ ಸಂತ ಅಲೋಷಿಯಸ್ ಗೊಂನ್ಜಾಗ ಶಾಲೆಯ2018ರ ಶೈಕ್ಷಣಿಕ ಅಧಿವೇಶನ ಇನ್ವೆಸ್ಟಿಟ್ಯೂರ್ ಸಮಾರಂಭವು ಗೊನ್ಸಾಗಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಕೂಳೂರಿನ ಆರ್ಮಿ ನೇಮಕಾತಿ ಕಛೇರಿ, ಎಸ್‌ಎಂ-ನಿರ್ದೇಶಕ ಕೋಲ್.ಎಂ.ಎ ರಾಜಮನ್ನರ್ ಆಗಮಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿ, ಸೇಂಟ್ ಅಲೋಶಿಯಸ್ ಗೊನ್ಜಾಗಾ ಶಾಲೆಯ ಪ್ರಾಂಶುಪಾಲರು ಹಾಗೂ ಮ್ಯಾನೇಜರ್ ರೆವರೆಂಡ್ ಫಾದರ್ ಮೆಲ್ವಿನ್ ಮೆಂಡೋನ್ಕಾ ಎಸ್.ಜೆ. ಹಾಗೂ ರೆವರೆಂಡ್ ಫಾದರ್ ಲಿಯೊ ಡಿಸೌಜಾ ಎಸ್‌ಜೆ ಅವರು ವಿಶೇಷ ಅತಿಥಿಗಳಲ್ಲಿ ಒಬ್ಬರಾಗಿದ್ದರು.

 

ಶಾಲೆಯ ಹೆಡ್ ಬಾಯ್ ಲ್ಯೂಕ್ ಸ್ಯಾಮ್ಸನ್ ಲೋಬೊ ಮತ್ತು ಹೆಡ್ ಗರ್ಲ್ ಡೆಲಿಸ್ ಸೊರೊಯಾ ಮೆಂಡೆಸ್ ನೇತೃತ್ವದಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ವಿದ್ಯಾರ್ಥಿ ಕೌನ್ಸಿಲ್ ಸದಸ್ಯರಿಗೆ ಮುಖ್ಯ ಅತಿಥಿ, ಮ್ಯಾನೇಜರ್ ಮತ್ತು ಪ್ರಾಂಶುಪಾಲರು ಸ್ಯಾಶೆ ಮತ್ತು ಬ್ಯಾಡ್ಜ್‌ಗಳನ್ನು ನೀಡಿದರು. ನಂತರ ವಿದ್ಯಾರ್ಥಿಗಳಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು.ಈ ಸಂದರ್ಭ ದೀಪಾ ಕಾರ್ಕಾಡಾ, ಜಿಸಿಂತಾ ಡಿ ಕೋಸ್ಟಾ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply