Header Ads
Header Ads
Breaking News

ಸಮುದ್ರ ಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಕುಂದಾಪುರ: ಭಾನುವಾರದ ರಜಾ ದಿನ ಮೀನುಗಾರಿಕೆಯಲ್ಲಿ ನಿರತರಾದ ತಂದೆಯೊಂದಿಗೆ ಸಮುದ್ರ ತೀರದಲ್ಲಿ ಬಲೆ ಹಾಕುತ್ತಿರುವಾಗ ಬೃಹತ್ ಅಲೆಗಳ ಅಬ್ಬರಕ್ಕೆ ಕೊಚ್ಚಿ ಸಮುದ್ರ ಪಾಲಾದ ವಿದ್ಯಾರ್ಥಿ ಮನೋಜ್ ಪೂಜಾರಿ (18) ಮೃತದೇಹ ಇಂದು ಕೋಡಿ-ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಪತ್ತೆಯಾಗಿದೆ. ಭಾನುವಾರ ಮದ್ಯಾಹ್ನ ತನ್ನ ತಂದೆ ಮಂಜುನಾಥ್ ಪೂಜಾರಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವರಿಗೆ ಸಹಕರಿಸುತ್ತಿದ್ದ ಮನೋಜ್ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದರು. ಸೋಮವಾರ ದೋಣಿ, ಬೋಟ್ ಮೂಲಕ ಹುಡುಕಾಟ ನಡೆಸುತ್ತಿರುವಾಗ ಸಂಜೆ ಸುಮಾರಿಗೆ ಗಂಗೊಳ್ಳಿ-ಕೋಡಿ ಅಳಿವೆ ಬಾಗಿಲು ಪ್ರದೇಶದಲ್ಲಿ ಮನೋಜ್ ಮೃತದೇಹ ಪತ್ತೆಯಾಗಿದ್ದು ಶವವನ್ನು ದಡಕ್ಕೆ ತಂದಿದ್ದಾರೆ. ಸದ್ಯ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಕುಂದಾಪುರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply