Header Ads
Header Ads
Breaking News

ಸಮ್ಮೋಹನ ಚಿಕಿತ್ಸೆ ಹಾಗೂ ಅದರ ಅನ್ವಯ ಕುರಿತ ಕಾರ್ಯಾಗಾರ : ಉಜಿರೆಯ ಎಸ್‌ಡಿಎಮ್ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ

ಔಷಧಿಗಳಿಲ್ಲದೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಸಮ್ಮೋಹನ ಚಿಕಿತ್ಸೆಗಿದೆ. ಹಾಗಾಗಿ ಇಂತಹ ಚಿಕಿತ್ಸೆಯನ್ನು ನಾವು ಸ್ವಾಗತಿಸಬೇಕು. ವಿಜ್ಞಾನದ ಪ್ರಕಾರ , ಅನೇಕ ಕಾಯಿಲೆಗಳು ಮನೋದೈಹಿಕ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಟಿ.ಎನ್. ಕೇಶವ್ ಹೇಳಿದರು.

ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದ ವತಿಯಿಂದ ನಡೆದ ಸಮ್ಮೋಹನ ಚಿಕಿತ್ಸೆ ಹಾಗೂ ಅದರ ಅನ್ವಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಮ್ಮೋಹನ ಚಿಕಿತ್ಸಕ ಹಾಗೂ ತರಬೇತುದಾರ ಪ್ರತೀಕ್ ಮೋತಿಕರ್ ಮೋಹನ್ ಮಾತನಾಡಿ, ಸಮ್ಮೋಹನ ಚಿಕಿತ್ಸೆಯ ಇತಿಹಾಸ, ಅದು ಬೆಳೆದು ಬಂದ ಹಾದಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಮ್ಮೋಹನ ಮತ್ತು ವಶೀಕರಣದ ನಡುವೆ ಹಲವು ವ್ಯತ್ಯಾಸಗಳಿವೆ. ಸ್ವಯಂ ಸಮ್ಮೋಹನವನ್ನು ಮಾಡಿಕೊಳ್ಳುವುದರಿಂದ ಅನೇಕ ಲಾಭವಿದೆ. ಎಂದು ವಿಭಾಗದ ಮುಖ್ಯಸ್ಥರಾದ ಗೋಪಾಲ್ ಪಟವರ್ಧನ್ ತಿಳಿಸಿದರು.

ಕಾರ್ಯಾಗಾರದಲ್ಲಿ ವಿಭಾಗದ ಸಹ ಪ್ರಾಧ್ಯಾಪಕರಾದ ಸುಧೀರ್ ಕೆ. ವಿ. ,ಕಾಗ್ನಿಟೋ ಅಸೋಸಿಯೇಷನ್ ನ ಕಾರ್ಯದರ್ಶಿ ಸ್ವಾತಿ ಹಾಗೂ ಮನಶಾಸ್ತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply