Header Ads
Header Ads
Breaking News

ಸಯ್ಯಿದ್ ಮದನಿ ಉರ್ದು ಶಾಲೆ ವಾರ್ಷಿಕ ಕ್ರೀಡಾಕೂಟ

ಉಳ್ಳಾಲ: ಸಯ್ಯಿದ್ ಮದನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಕೂಟ ಅಳೇಕಲ ಮದನಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿಯವರು ಶಾಂತಿಯ ಸಂಕೇತವಾದ ಪಾರಿವಾಳ ವನ್ನು ಹಾರಿಸುವುದರೊಂದಿಗೆ ಉದ್ಘಾಟಿಸಿದರು.ನಂತರ ಮಾತನಾಡಿ ಅವರು ಪಠ್ಯೇತರ ಚಟುವಟಿಕೆಯೊಂದಿಗೆ ಕಲೆ ಸಾಹಿತ್ಯ ಸಂಸ್ಕ್ರತಿ ಜೊತೆಗೆ ಕ್ರೀಡಾಕೂಟಕ್ಕೆ ಹಳೇಕೋಟೆ ಶಾಲೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ಗಳ ಭವಿಷ್ಯವನ್ನು ಉಜ್ವಲವಾಗಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷದಿಂದ ಹೆಣ್ಮಕ್ಕಳ ಶಿಕ್ಷಣಕ್ಕೂ ಸಂಸ್ಥೆ ಅವಕಾಶ ಮಾಡಿಕೊಡುತ್ತಿರುವುದು, ಶಿಕ್ಷಣ ಸಂಸ್ಥೆ ಯ ಸಾಮಾಜಿಕ ಬದ್ಧತೆ ಎತ್ತಿ ಹಿಡಿಯುವಂತಿದೆ ಎಂದರು.

ಉಳ್ಳಾಲ ಆರಕ್ಷಕ ಠಾಣಾ ಉಪನಿರೀಕ್ಷಕ ವಿನಾಯಕ್ ತೋರಗಲ್ ಹಸಿರು ನೀಲ್ ತೋರಿಸುವಿದರೊಂದಿಗೆ ಪಥಸಂಚಲನಕ್ಜೆ ಚಾಲನೆ ನೀಡಿದರು. ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ವಿ ಆಳ್ವ ಧ್ವಜ ವಂದನೆ ಸ್ವೀಕರಿಸಿದು, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾದ್ಯಕ್ಷರಾದ ಹಾಜಿ ಯು.ಕೆ ಇಬ್ರಾಹಿಂರವರು ಧ್ವಜಾರೋಹಣ ಮಾಡಿದರು.

ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನ ಪ್ರ ಕಾರ್ಯದರ್ಶಿ ಹಾಜಿ ಮೂಹಮ್ಮದ್ ತ್ವಾಹ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಉಳ್ಳಾಲ ನಗರ ಸಭೆಯ ಸದಸ್ಯರಾದ ಯು.ಎ ಇಸ್ಮಾಯಿಲ್, ಮುಝಫರ್. ಅಸ್ಗರ್ ಅಲಿ, ಅಳೇಕಲ ಮದನಿ ಶಾಲಾ ಸಂಚಾಲಕರಾದ ಇಬ್ರಾಹಿಂ ಯು ಎನ್, ಶಾಲಾಭಿವ್ರದ್ದಿ ಸಮಿತಿ ಉಪಾಧ್ಯಕ್ಷ ಯು.ಎನ್ ಇಬ್ರಾಹಿಂ, ಸದಸ್ಯರುಗಳಾದ ಫಾರೂಕ್ ಯು ಹೆಚ್, ಕರೀಂ ಯು ಹೆಚ್, ಹಾಜಿ ಝೈನುದ್ದೀನ್, ಅಲ್ತಾಪ್ ಯು.ಹೆಚ್, ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಅಲಿ ಮೋನು, ಸಹೋದರ ಸಂಸ್ಥೆಯ ಮುಖ್ಯಶಿಕ್ಷಕರುಗಳಾದ ನಸೀಮಾ, ಇಮ್ತಿಯಾಝ್, ರಮ್ಲತ್, ಪ್ರತಿಭಾ, ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ, ಶಿಕ್ಷಕಿ ಸ್ವಮ್ಯಾ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಫೀಕ್ ಹಮೀದ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Related posts

Leave a Reply