Header Ads
Header Ads
Header Ads
Breaking News

ಸರಕಾರದ ಅಸಮರ್ಪಕ ಮರಳು ನೀತಿಯ ವಿರುದ್ದ ಪ್ರತಿಭಟನೆ ವಸತಿ ಯೋಜನೆಯ ಮನೆ ನಿರ್ಮಾಣ ಕಾಮಗಾರಿ ಸ್ಥಗಿತ ಪ್ರತಿಭಟನೆಯಲ್ಲಿ ಶಾಸಕ ಎಸ್. ಅಂಗಾರ ಆಕ್ರೋಶ

ಸರಕಾರದ ಅಸಮರ್ಪಕ ಮರಳು ನೀತಿಯಿಂದಾಗಿ ಮರಳಿನ ಅಭಾವ ಜಿಲ್ಲೆಯಲ್ಲಿ ತೀವ್ರವಾಗಿ ತಲೆದೋರಿದೆ. ಇದರಿಂದ ಬಹಳಷ್ಟು ಅಭಿವೃದ್ದಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಅಲ್ಲದೇ ಮರಳು ಕೊರತೆಯಿಂದ ಸರಕಾರದ ಬಸವ ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿಯಡಿ ಮಂಜೂರಾದ ಬಡ ಫಲಾನುಭವಿಗಳ ಮನೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಇದಕ್ಕೆ ಸರಕಾರವೇ ನೇರ ಹೊಣೆ ಎಂದು ಶಾಸಕ ಎಸ್. ಅಂಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಸುಳ್ಯದ ಖಾಸಾಗಿ ಬಸ್ ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮತ್ತು ಲಾರಿ ಮಾಲಕ ಮತ್ತು ಚಾಲಕ ಸಂಘದ ವತಿಯಿಂದ ಸರಕಾರದ ಅಸಮರ್ಪಕ ಮರಳು ನೀತಿಯ ವಿರುದ್ದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಹಲವು ಭಾಗ್ಯಗಳನ್ನು ಕರುಣಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಬಡ ಜನರಿಗೆ ಅತಂತ್ರ ಭಾಗ್ಯವನ್ನು ನೀಡಿದ್ದಾರೆ. ಮರಳು ಕೊರತೆಯಿಂದ ಕಟ್ಟಡ ಮತ್ತು ಗಾರೆ ಕೆಲಸದ ಕಾರ್ಮಿಕರು ಕೆಲಸವಿಲ್ಲದೇ ಪರದಾಡುವ ಸ್ಥಿತಿ ಒದಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಮುಖಂಡರಾದ ಪ್ರಕಾಶ್ ಹೆಗ್ಡೆ, ಚಂದ್ರಾ ಕೋಲ್ಚಾರ್, ರಾಧಾಕೃಷ್ಣ ಬೊಳ್ಳೂರು, ಕಿರಣ್ ಕುರುಂಜಿ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪದ್ಮನಾಭ ಸುಳ್ಯ

Related posts

Leave a Reply