Header Ads
Breaking News

ಸರಕಾರಿ ಪ್ರೌಢ ಶಾಲೆ ಉದ್ಯಾವರ ಗುಡ್ದೆಯಲ್ಲಿ ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ ಉದ್ಘಾಟನೆ

ಮಂಜೇಶ್ವರ: ಸರಕಾರಿ ಪ್ರೌಢ ಶಾಲೆ ಉದ್ಯಾವರ ಗುಡ್ದೆ ಶಾಲೆಗೆ ಕಾಸರಗೋಡು ಜಿಲ್ಲಾ ಪಂ. ವತಿಯಿಂದ ಸುಮಾರು 13.5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತವಾದ ಹೆಣ್ಮಕ್ಕಳ ವಿಶ್ರಾಂತಿ ಕೊಠಡಿಯನ್ನು ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಎಜಿಸಿ ಬಶೀರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಶಿಕ್ಷಣಕ್ಕಾಗಿ ಜಿಲ್ಲಾ ಪಂ. ಉತ್ತಮವಾದ ಪ್ರೋತ್ಸಾಹವನ್ನು ನೀಡುತ್ತಾ ಇದೆ. ಇತ್ತೀಚೆಗಷ್ಟೇ ಆರ್ ಎಂ ಎಸ್ ಯೋಜನೆಯ ಅಧೀನದಲ್ಲಿ ಹೈಸ್ಕೂಲ್ ಆಗಿ ಭರ್ತಿ ಹೊಂದಿದ ಈ ಶಾಲೆ ಜಿಲ್ಲಾ ಪಂ. ನ ವ್ಯಾಪ್ತಿಯಲ್ಲಿರುವ 19 ಶಾಲೆಗಳ ಪೈಕಿ ಒಂದಾಗಿದೆ ಎಂದು ಹೇಳಿದರು. ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದರು.ಜಿಲ್ಲಾ ಪಂ. ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಝಾಕ್ ಕೆದಂಬಾಡಿ, ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶ್, ಮುಖ್ಯೋಪಧ್ಯಾಯಿನಿ ಉದಯ ಕುಮಾರಿ, ಯೂಸುಫ್ ಜಮಾಲ್, ಎಂ ಎಸ್ ಇಬ್ರಾಹಿಂ ಹಂಝ ಮೊದಲಾದವರು ಉಪಸ್ಥರಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಶಾಲೆಗೆ ಉತ್ತಮವಾದ ಗ್ರಂಥಾಲಯ ಹಾಗೂ ಪ್ರಯೋಗಾಲಯವನ್ನು ನಿರ್ಮಿಸಿ ಕೊಡುವಂತೆ ಪಂ. ಅಧ್ಯಕ್ಷರಿಗೆ ಮನವಿಯನ್ನು ನೀಡಲಾಯಿತು.

Related posts

Leave a Reply

Your email address will not be published. Required fields are marked *