Header Ads
Header Ads
Header Ads
Breaking News

‘ಸರಕಾರಿ ಶಾಲೆ ಉಳಿಸಿ’ ಜನಪ್ರತಿನಿಧಿಗಳೊಂದಿಗೆ ಸಂವಾದ ಕುಂದಾಪುರದ ಕೋಟ ಕಾರಂತ ಭವನದಲ್ಲಿ ಸಂವಾದ ಕಾರ್ಯಕ್ರಮ

ಕರ್ನಾಟಕದಲ್ಲಿ ಪ್ರಸ್ತುತ 48 ಸಾವಿರ ಸರಕಾರಿ ಶಾಲೆಗಳಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕಾಗಿ 18 ಸಾವಿರ ಕೋಟಿ ರೂ ಗಿಂತ ಹೆಚ್ಚು ಹಣ ರಾಜ್ಯದಲ್ಲಿ ಖರ್ಚಾಗುತ್ತದೆ.ಇಷ್ಟೆಲ್ಲ ಇದ್ದರು ಮುಂದಿನ ಮೂರು ವರ್ಷದಲ್ಲಿ 48,000ಕ್ಕೂ ಹೆಚ್ಚು ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತದೆ ಎನ್ನುವ ಆತಂಕವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಕೋಟ ಕಾರಂತ ಭವನದಲ್ಲಿ ‘ ಸರಕಾರಿ ಶಾಲೆ ಉಳಿಸಿ’ ಎನ್ನುವ ವಿಚಾರದ ಕುರಿತು ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪ್ರತಿನಿಧಿಗಳು, ಸರಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯಬೇಕು. ಮುಂದೆ ಸದನದಲ್ಲಿ ಈ ಮಸೂದೆ ಚರ್ಚೆಗೆ ಬಂದರೆ ನಾನು ಮುಂದೆ ನಿಂತು ಬೆಂಬಲಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ಸರಕಾರಿ ಶಾಲೆಗಳ ಉಳಿವು ಕೇವಲ ಕೆಲವೇ ಮಂದಿಯಿಂದ ಆಗುವ ಕಾರ್‍ಯವಲ್ಲ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿದರೆ ಗುರಿ ತಲುಪಬಹುದು. ನಿಮ್ಮ ಈ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ಕೈಜೋಡಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಚಂದ್ರಮೋಹನ್, ಸರಸ್ವತಿ ಪುತ್ರನ್, ರವೀಂದ್ರ ದೊಡ್ಮನೆ, ಕೃಷ್ಣ, ಶೇಖರ್, ರಂಜಿತ್ ಕೋಟ ಮುಂತಾದವರು ಜನಾಭಿಪ್ರಾಯ ವ್ಯಕ್ತಪಡಿಸಿದರು. ವಿದ್ವಾನ್ ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply