Header Ads
Breaking News

ಸರಣೆ ಅಪಘಾತಗಳ ತಾಣವಾಗುತ್ತಿದೆ ಪಡುಬಿದ್ರಿ ಹೆದ್ದಾರಿ

 

ಪಡುಬಿದ್ರಿ ಹೆದ್ದಾರಿಯು ದಿನದಿಂದ ದಿನಕ್ಕೆ ಸರಣಿ ಅಪಘಾತಗಳ ತಾಣವಾಗುತ್ತಿದೆ. ನವಯುಗ್ ಕಂಪೆನಿಯು ರಸ್ತೆಯನ್ನು ಅಗೆದು ತುಂಡು ಮಾಡಿಟ್ಟು ಹೋಗಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸರಣಿ ಅಪಘಾತಗಳು ಸಂಭವಿಸುತಾ ಇದೆ. ಪಡುಬಿದ್ರಿಯ ನಾಗರಾಜ್ ಎಸ್ಟೇಟ್ ಬಳಿ ಇರುವ ಹೆದ್ದಾರಿಯನ್ನು ಅಗೆತದಿಂದ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ವಾಹನ ಚಲಿಸುವಂತಹ ಪರಿಸ್ಥಿತಿ ಎದುರಾಗಿದೆ.

Related posts

Leave a Reply

Your email address will not be published. Required fields are marked *