Header Ads
Header Ads
Header Ads
Breaking News

ಸರದಾರ್ ವಲ್ಲಭಬಾಯಿ ಪಟೇಲ್‌ರ ಜನ್ಮದಿನಾಚರಣೆ ಬಂಟ್ವಾಳ ಪುರಸಭೆ ವತಿಯಿಂದ ಐಕ್ಯತೆಗಾಗಿ ಓಟ ಪಾಣೆಮಂಗಳೂರು ವೀರ ವಿಠಲ ದೇವಳ ಬಳಿ ಚಾಲನೆ

ಬಂಟ್ವಾಳ: ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಪುರಸಭೆ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಹಾಗೂ ರೋಟರ್ ಕ್ಲಬ್ ಸಹಯೋಗದೊಂದಿಗೆ ಐಕ್ಯತೆಗಾಗಿ ಓಟ ಮಂಗಳವಾರ ನಡೆದಿದ್ದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಪಾಣೆಮಂಗಳೂರು ವೀರ ವಿಠಲ ದೇವಸ್ಥಾನದ ಬಳಿ ಚಾಲನೆ ನೀಡಿದರು.

ಪಾಣೆಮಂಗಳೂರು ಪೇಟೆಯಯಿಂದ ಮೆಲ್ಕಾರ್‌ವರೆಗೆ ಜಾಥ ನಡೆಯಿತು. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರಮುಖರು, ಅಧಿಕಾರಿಗಳು ಪಾಲ್ಗೊಂಡರು. ಬಳಿಕ ಮೆಲ್ಕಾರ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ ಬಂಟ್ವಾಳ ಪುರಸಭೆಯಲ್ಲಿ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ವಿಚಾರದ ಕುರಿತು ಸಚಿವ ರಮಾನಾಥ ರೈ ಸೂಚನೆಯಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪುರಸಭೆಗೆ ಪೈರೋಲಿಸಿಸ್ ಯಂತ್ರ ಮಂಜೂರಾಗಿದೆ ಎಂದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸಂಜೀವಿ, ಜಗದೀಶ ಕುಂದರ್, ಜೆಸಿಂತಾ ಡಿಸೋಜ, ಚಂಚಲಾಕ್ಷಿ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಮುದಾಯ ಸಂಘಟನಾಧಿಕಾರಿ ಮತ್ತಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ ಮತ್ತಿತತರರು ಉಪಸ್ಥಿತರಿದ್ದರು.

Related posts

Leave a Reply