Header Ads
Header Ads
Breaking News

ಸರದಾರ ವಲ್ಲಭಬಾಯಿ ಪಟೇಲ್ ಅವರ 144ನೇ ಜನ್ಮದಿನಾಚರಣೆ : ಏಕತಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಮೋದಿ

ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯ ಕೇವಾಡಿಯಾ ಎಂಬ ಪಟ್ಟಣದಲ್ಲಿರುವ ಪಟೇಲ್ ಅವರ ಏಕತೆ ಪ್ರತಿಮಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಪಟೇಲ್ ಅವರ ಪ್ರತಿಮೆಗೆ ಪುಷ್ಪಗುಚ್ಛವಿರಿಸಿ ಪ್ರದಕ್ಷಿಣೆ ಬಂದರು. ನಂತರ ಕೇವಾಡಿಯಾದಲ್ಲಿ ನಡೆದ ಏಕತಾ ದಿವಸ ಪರೇಡ್ ನಲ್ಲಿ ಭಾಗವಹಿಸಿ ನೆರೆದ ಜನತೆಗೆ ಏಕತೆಯ ಪ್ರಮಾಣವನ್ನು ಬೋಧಿಸಿದರು. ನಂತರ ಮಾತನಾಡಿದ ಪ್ರಧಾನಿ, ನಮ್ಮ ದೇಶದ ಬಹುದೊಡ್ಡ ನಾಯಕ ಸರ್ದಾರ್ ಪಟೇಲ್ ಅವರ ಜಯಂತಿ ಸಂದರ್ಭದಲ್ಲಿ ಅವರಿಗೆ ನಮನಗಳು. ನಮ್ಮ ದೇಶಕ್ಕೆ ಅವರ ಕೊಡುಗೆ ಸ್ಮರಣೀಯವಾದದ್ದು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *